Wednesday, June 3, 2026
Homeಕರಾವಳಿಮಂಗಳೂರು ನಗರದಲ್ಲಿ ತಡರಾತ್ರಿ ಮತ್ತೆ ಗ್ಯಾಸ್ ಲೀಕೇಜ್ ವಾಸನೆ

ಮಂಗಳೂರು ನಗರದಲ್ಲಿ ತಡರಾತ್ರಿ ಮತ್ತೆ ಗ್ಯಾಸ್ ಲೀಕೇಜ್ ವಾಸನೆ

- Advertisement -
- Advertisement -

ಮಂಗಳೂರು: ಮಂಗಳೂರು ನಗರದಲ್ಲಿ ನಿನ್ನೆ ಮತ್ತೆ ಗ್ಯಾಸ್ ಲೀಕೇಜ್ ವಾಸನೆ ಕಂಡುಬಂದಿದೆ.

ನಿನ್ನೆ ತಡರಾತ್ರಿ ವೇಳೆಗೆ ಎಲ್‌ಪಿಜಿ ಮತ್ತು ಸೀಮೆಎಣ್ಣೆ ರೀತಿಯಲ್ಲಿ ವಾಸನೆ ಬಂದಿದ್ದು, ಮಂಗಳೂರು‌ ನಗರದ ಹಲವು ಸ್ಥಳಗಳಲ್ಲಿ ಒಂದೇ ತರಹದ ವಾಸನೆ ವ್ಯಕ್ತವಾಗಿದೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಕೂಡಾ ಇದೇ ರೀತಿಯಲ್ಲಿ ವಾಸನೆ ಬಂದಿದ್ದು, ಅಂದು ಮಂಗಳೂರಿನ‌ ಅರ್ಧ ಭಾಗದಷ್ಟು ವಾಸನೆ ಆವರಿಸಿತ್ತು.

ಹೀಗಾಗಿ ನಿನ್ನೆ ರಾತ್ರಿ ಕೂಡಾ ಅದೇ ರೀತಿಯಲ್ಲಿ ವಾಸನೆ ಬಂದಿದ್ದರಿಂದ ಮಂಗಳೂರು ‌ನಗರದಲ್ಲಿ ಕೆಲವು ಕಾಲ ಜನರು ಆತಂಕಗೊಳ್ಳುವಂತಾಗಿತ್ತು.

- Advertisement -

Latest News

error: Content is protected !!