Sunday, June 23, 2024
Homeತಾಜಾ ಸುದ್ದಿವಿವಾಹಿತನಿಂದ ಕಿರುಕುಳ ಆರೋಪ: ಪುತ್ತೂರಿನಲ್ಲಿ ಸಂಪಾಜೆಯ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ

ವಿವಾಹಿತನಿಂದ ಕಿರುಕುಳ ಆರೋಪ: ಪುತ್ತೂರಿನಲ್ಲಿ ಸಂಪಾಜೆಯ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ

spot_img
- Advertisement -
- Advertisement -

ಪುತ್ತೂರು : ವಿವಾಹಿತ ನೀಡುತ್ತಿದ್ದ ಮಾನಸಿಕ ಕಿರುಕುಳ ಹಾಗೂ ಜೀವ ಬೆದರಿಕೆಯಿಂದ ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಧುಶ್ರೀ(26) ಕೆರೆಗೆ ಹಾರಿ ನಿನ್ನೆ ಮಧ್ಯಾಹ್ನ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಂಪಾಜೆ ಗ್ರಾಮದ ಬಂಗ್ಲೆಗುಡ್ಡೆ ಬಾಲಕೃಷ್ಣ ಗೌಡರ ಪುತ್ರಿಯಾದ ಮಧುಶ್ರೀ, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ರಿಸ್ಪೆಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನ ಸಂಪ್ಯದ ಕೊಲ್ಯದಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದ ಮಧುಶ್ರೀ ಊಟವಾದ ಬಳಿಕ ತೋಟಕ್ಕೆ ಹೋಗಿ, ಕೆರೆಗೆ ಹಾರಿದ್ದಾರೆ. ನಾಲ್ಕು ವರ್ಷದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಧುಶ್ರೀ, ರಾತ್ರಿ ಆಸ್ಪತ್ರೆಯ ಹಾಸ್ಟೆಲ್ ನಲ್ಲಿ ತಂಗುತ್ತಿದ್ದರು. ರಜಾ ದಿನಗಳಲ್ಲಿ ಅಜ್ಜಿ ಮನೆಗೆ ಬರುತ್ತಿದ್ದರು. ಮಂಗಳವಾರ ಸಂಜೆಯವರೆಗೆ ಕರ್ತವ್ಯ ನಿರ್ವಹಿಸಿ ಬಳಿಕ ಹಾಸ್ಟೆಲ್ ನಲ್ಲಿ ತಂಗಿದ್ದ ಮಧುಶ್ರೀ ನಿನ್ನೆ ಮಧ್ಯಾಹ್ನ ಅಜ್ಜಿ ಮನೆಗೆ ಬಂದಿದ್ದರು. ಹಾಗೇ ಬಂದವರು ಊಟ ಮಾಡಿ ಎಲ್ಲರೊಂದಿಗೂ ಮಾತನಾಡಿಕೊಂಡಿದ್ದರು.ಬಳಿಕ ಮನೆಯವರು ಮಧ್ಯಾಹ್ನ ಮಲಗಿದ್ದರು. ಎದ್ದು ನೋಡುವಾಗ ಆಕೆ ಕಾಣದ್ದನ್ನು ಕಂಡು ಹುಡುಕಿದಾಗ ಅಜ್ಜಿ ಮನೆಯ ಸಮೀಪದ ಚೋಮಣ್ಣ ಎಂಬವರ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.

ವಿವಾಹಿತನ ಕಿರುಕುಳದಿಂದ ಆತ್ಮಹತ್ಯೆ

ಇನ್ನು ಮಧುಶ್ರೀ ಆತ್ಮಹತ್ಯೆಗೆ ವಿವಾಹಿತನೊಬ್ಬ ನೀಡುತ್ತಿದ್ದ ಕಿರುಕುಳವೇ ಕಾರಣ ಅನ್ನೋ ಗೊತ್ತಾಗಿದೆ. ಈ ಬಗ್ಗೆ ಮಧುಶ್ರೀ ತನ್ನ ಬ್ಯಾಗ್ ನಲ್ಲಿದ್ದ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ನಾನು ಹಾಗೂ ಸಂಪಾಜೆಯ ದೇವಿಚರಣ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದೆವು.ಆದರೆ ಕಳೆದ ಜೂನ್ ನಲ್ಲಿ ಆತನಿಗಿ ವಿವಾಹವಾಗಿತ್ತು. ಹೀಗಿದ್ದರೂ ಆತ ನನ್ನ ಜೊತೆ ಸಂಪರ್ಕದಲ್ಲಿದ್ದ. ನನಗೆ ಬೇರೆಯವರನ್ನು ಮದುವೆಯಾಗದ್ದಂತೆ ಒತ್ತಾಯ ಮಾಡುತ್ತಿದ್ದ. ಅಲ್ಲದೇ ಒಂದು ವೇಳೆ ಮದುವೆಯಾದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಆತನ ಕಿರುಕುಳದ ಬಗ್ಗೆ ಮಧುಶ್ರೀ ಮನೆಯವರ ಬಳಿ ಕೂಡ ಹೇಳಿಕೊಂಡಿದ್ದರು ಎನ್ನಲಾಗಿದೆ.

ಇನ್ನು ಮಧುಶ್ರೀ ಆತ್ಮಹತ್ಯೆಗೆ ದೇವಿಚರಣ್ ಕಾರಣ ಅಂತಾ ಮಧುಶ್ರೀ ಮಾವ ವಿಠಲ್ ಗೌಡ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸಂಪ್ಯ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!