Monday, June 8, 2026
Homeಕರಾವಳಿವಿಟ್ಲ; ಖಾಸಗಿ ಬಸ್ ನಿಂದ ಹೊರಗೆ ಎಸೆಯಲ್ಪಟ್ಟು ಯುವತಿಗೆ ಗಂಭೀರ ಗಾಯ

ವಿಟ್ಲ; ಖಾಸಗಿ ಬಸ್ ನಿಂದ ಹೊರಗೆ ಎಸೆಯಲ್ಪಟ್ಟು ಯುವತಿಗೆ ಗಂಭೀರ ಗಾಯ

- Advertisement -
- Advertisement -

ವಿಟ್ಲ; ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಧರೆಗೆ ಢಿಕ್ಕಿಯಾದ ಪರಿಣಾಮ ಬಸ್ಸಿನಲ್ಲಿದ್ದ ಯುವತಿ ಹೊರಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಸಮೀಪದ ಕೆಲಿಂಜ ಎಂಬಲ್ಲಿ ನಡೆದಿದೆ.ಘಟನೆಯಲ್ಲಿ  ಉಳಿದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ,

ವಿಟ್ಲದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸೆಲಿನಾ ಬಸ್ ಅಪಘಾತದ ವೇಳೆ ಬಸ್ ನ ಮುಂಭಾಗದ ಗಾಜು ಒಡೆದು ಯುವತಿ ಹೊರಕ್ಕೆ ಎಸೆಯಲ್ಪಟ್ಟಿದ್ದಾಳೆ.ಯುವತಿಗೆ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಉಳಿದಂತೆ ಅನೇಕ ಪ್ರಯಾಣಿಕರಿಗೂ ಗಾಯವಾಗಿದೆ.

ಜಾಯಿಂಟ್ ವೀಲ್ ಕಡಿತಗೊಂಡು ಅಪಘಾತ ಸಂಭವಿಸಿದೆ ಎಂದು ಚಾಲಕ ಹೇಳುತ್ತಿದ್ದಾರೆ.ಆದರೆ ಅತಿಯಾದ ವೇಗದಿಂದ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

- Advertisement -

Latest News

error: Content is protected !!