Tuesday, May 7, 2024
Homeಕರಾವಳಿಮಂಗಳೂರು; ಭಾರತ್ ಫ್ರೆಂಡ್ಸ್ ಕ್ಲಬ್ ಇರಾ ವತಿಯಿಂದ ರಾಷ್ಟ್ರ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾಟ

ಮಂಗಳೂರು; ಭಾರತ್ ಫ್ರೆಂಡ್ಸ್ ಕ್ಲಬ್ ಇರಾ ವತಿಯಿಂದ ರಾಷ್ಟ್ರ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾಟ

spot_img
- Advertisement -
- Advertisement -

ಮಂಗಳೂರು: ಭಾರತ್ ಫ್ರೆಂಡ್ಸ್ ಕ್ಲಬ್ ಇರಾ ಇದರ 25ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಇರಾ ಶಾಲಾ ಮೈದಾನದಲ್ಲಿ ಎರಡು ದಿನ ಆಯೋಜಿಸಲಾದ ಕಾರ್ಯಕ್ರಮದ ಮೊದಲ ದಿನ ಶನಿವಾರ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಇರಾ ಕಬಡ್ಡಿ ಪಂದ್ಯಾಟವನ್ನು ಎಂದು ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಎಸ್.ಗಣೇಶ್ ರಾವ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಪ್ರೀತಿ ವಿಶ್ವಾಸದ ಮೂಲಕ ಬಾಳುವ ಹಾಗೂ ಸರ್ವರನ್ನೂ ಸಮಚಿತ್ತದಿಂದ ಕಾಣುವ ಮನೋಭಾವ ಬೆಳೆಸಬೇಕು. ಕಬಡ್ಡಿ ಸಹಿತ ವಿವಿಧ ಕ್ರೀಡಾಕೂಟಗಳು ಇದಕ್ಕೆ ಪೂರಕ ಎಂದರು.

ಇನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ಸಮಾಜದಲ್ಲಿ ಶಾಂತಿ ಸೌಹಾರ್ಧತೆಯಿಂದ ಬಾಳಲು ಕ್ರೀಡಾಕೂಟ ಸಹಕಾರಿ. ಭಾರತ್ ಫ್ರೆಂಡ್ಸ್ ಕ್ಲಬ್ ಈ ನಿಟ್ಟಿನಲ್ಲಿ ಕಳೆದ 25 ವರ್ಷದಲ್ಲಿ ಯಶಸ್ವಿ ಕಾರ್ಯದ ಮೂಲಕ ಗುರುತಿಸಿಕೊಂಡಿದೆ ಎಂದರು.

ನ್ಯಾಯವಾದಿಗಳಾದ ಜಯಪ್ರಕಾಶ್ ರೈ ಸುಳ್ಯ, ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಸೂರ್ಯಕಾಂತ್, ಇರಾ ಗ್ರಾ.ಪಂ ಅಧ್ಯಕ್ಷೆ ಆಗ್ನೆಸ್ ಡಿಸೋಜ, ಉದ್ಯಮಿ ರಾಧಾಕೃಷ್ಣ ರೈ ಉಮಿಯ, ಬಂಟ್ವಾಳ ತಾ.ಪಂ ಮಾಜಿ ಅಧ್ಯಕ್ಷ ಚಂದ್ರಹಾಸ್ ಆರ್.ಕರ್ಕೇರ, ಇರಾ ಶಾಲೆಯ ಮುಖ್ಯ ಶಿಕ್ಷಕಿ ಶೋನಿತಾ, ಪ್ರಮುಖರಾದ ಪಿ.ಎಂ.ಕೊಡಂಗೆ, ವಾಮನ ಪೂಜಾರಿ ತಾಳಿತ್ತಬೆಟ್ಟು, ಭಾರತ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಲತೇಶ್ ಕಲ್ಲಾಡಿ, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ರಾಜಶೇಖರ ರೈ ಇರಾಗುತ್ತು ಮುಂತಾದವರು ಉಪಸ್ಥಿತರಿದ್ದರು. ಚಂದ್ರಹಾಸ್ ಶೆಟ್ಟಿ ಸಂಪಿಲ ಸ್ವಾಗತಿಸಿದರು. ದೇವಿಪ್ರಸಾದ್ ಶೆಟ್ಟಿ ವಂದಿಸಿದರು.

ಇಂದು ಸಾಂಸ್ಕೃತಿಕ ಕಲಾ ವೈಭವ ಭಾನುವಾರ ಬೆಳಗ್ಗೆ 10ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. 11ರಿಂದ ಪಟ್ಲ ಸತೀಶ್ ಶೆಟ್ಟಿ ಹಾಗೂ ಜನ್ಸಾಲೆ ರಾಘವೇಂದ್ರ ಆಚಾರ್ಯ ಸಾರಥ್ಯದಲ್ಲಿ ಬಡಗು-ತೆಂಕು ಶೈಲಿಯ ಯಕ್ಷ-ಗಾನ-ನಾಟ್ಯ ವೈಭವ ನಡೆಯಲಿದೆ. ಮಧ್ಯಾಹ್ನ 2ರಿಂದ ಜಿಲ್ಲೆಯ ಪ್ರಖ್ಯಾತ 10 ತಂಡಗಳ ಸ್ಪರ್ಧಾತ್ಮಕ ನೃತ್ಯ ಪ್ರದರ್ಶನ ‘ಡ್ಯಾನ್ಸ್ ಇರಾ ಡ್ಯಾನ್ಸ್’ ನಡೆಯಲಿದೆ. ರಾತ್ರಿ 7ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಬಳಿಕ ‘ಗರುಡ ಪಂಚೆಮಿ’ ನಾಟಕ ಪ್ರದರ್ಶನವಾಗಲಿದೆ

- Advertisement -
spot_img

Latest News

error: Content is protected !!