Thursday, June 4, 2026
HomeUncategorizedಮಂಗಳೂರು; ಶಾಪಿಂಗ್‌ ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಬಾಲಕಿ ನಾಪತ್ತೆ

ಮಂಗಳೂರು; ಶಾಪಿಂಗ್‌ ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಬಾಲಕಿ ನಾಪತ್ತೆ

- Advertisement -
- Advertisement -

ಮಂಗಳೂರು; ಶಾಪಿಂಗ್‌ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಬಾಲಕಿ ನಾಪತ್ತೆಯಾಗಿರುವ ಘಟನೆ ಸುರತ್ಕಲ್ ಮುಕ್ಕ ಸಮೀಪದ ಮಿತ್ರಪಟ್ನ ಎಂಬಲ್ಲಿ ನಡೆದಿದೆ. ಇಲ್ಲಿನ ಮಾತೃಛಾಯಾ ನಿವಾಸಿ ಸಂತೋಷ್ ಮತ್ತು ರೇಖಾ ದಂಪತಿಯ ಪುತ್ರಿ ಸ್ಫೂರ್ತಿ (17) ನಾಪತ್ತೆಯಾದ ಬಾಲಕಿ.

ಜೂ.8ರಂದು ಬೆಳಗ್ಗೆ 8.30 ರ ಸುಮಾರಿಗೆ ಶಾಪಿಂಗ್‌ಗೆ ಹೋಗುವುದಾಗಿ ಹೇಳಿ ಮುಕ್ಕ ಮಿತ್ರಪಟ್ನ ಮನೆಯಿಂದ ತೆರಳಿದ್ದ ಸ್ಫೂರ್ತಿ ಸಂಜೆಯಾದರೂ ಮನೆಗೆ ಬಂದಿರಲಿಲ್ಲ ಎನ್ನಲಾಗಿದೆ. ಗಾಬರಿಗೊಂಡ ಆಕೆಯ ಮನೆಯವರು ಸಂಬಂಧಿಕರು, ಸ್ನೇಹಿತರನ್ನು ವಿಚಾರಿದ್ದು, ಎಲ್ಲೂ ಆಕೆ ಪತ್ತೆಯಾಗಿಲ್ಲ. ಬಳಿಕ ಆಕೆಯ ತಾಯಿ ರೇಖಾ ಅವರು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ.

ನಾಪತ್ತೆಯಾದ ಸ್ಫೂರ್ತಿ 5 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಶರೀರ ಹೊಂದಿದ್ದಾರೆ. ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಬಿಳಿ ಬಣ್ಣದ ಟಿ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕುತ್ತಿಗೆಯಲ್ಲಿ ಚಿನ್ನದ ಸರ ಮತ್ತು ಸಣ್ಣ ತಾಯತ ಧರಿಸಿರುತ್ತಾರೆ.

ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್‌ ಠಾಣಾ ದೂರವಾಣಿ ಸಂಖ್ಯೆ 0824-2220540, 9480805360, 9480802345 ಅಥವಾ ಮಂಗಳೂರು ನಗರದ ಕಂಟ್ರೋಲ್‌ ರೂಮ್‌ 0824 2220800 ಗೆ ಸಂಪರ್ಕಿಸುವಂತೆ ಸುರತ್ಕಲ್‌ ಪೊಲೀಸ್‌ ಠಾಣೆಯ ಪ್ರಕಟಣೆ ತಿಳಿಸಿದೆ.

- Advertisement -

Latest News

error: Content is protected !!