Saturday, June 6, 2026
Homeಕರಾವಳಿಕಡಬ : ಮನೆಯಿಂದ ಹೊರ ಹೋದ ಯುವತಿ ನಾಪತ್ತೆ

ಕಡಬ : ಮನೆಯಿಂದ ಹೊರ ಹೋದ ಯುವತಿ ನಾಪತ್ತೆ

- Advertisement -
- Advertisement -

ಕಡಬ : ಮನೆಯಿಂದ ಹೊರ ಹೋದ ಯುವತಿ ನಾಪತ್ತೆಯಾಗಿರುವ ಘಟನೆ ಕಡಬದಲ್ಲಿ ನಡೆದಿದೆ. ಕಡಬ ಗ್ರಾಮದ ಕಳಾರ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ  ವಾಸವಿದ್ದ ರಕ್ಷಿತಾ (18) ನಾಪತ್ತೆಯಾದ ಯುವತಿ.

ಈಕೆ ಹಾಸನ ಜಿಲ್ಲೆ ಬೇಲೂರು ತಾಲೂಕು ಹಗರೆ ಅಂಗಡಿಹಳ್ಳಿಯವಳಾಗಿದ್ದು, ಇವರ ಕುಟುಂಬ  ಕಳೆದ 6 ವರ್ಷಗಳಿಂದ ಕಳಾರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.  ಕಾಣೆಯಾದ ಯುವತಿ 10ನೇ ತರಗತಿ ವಿದ್ಯಾಭ್ಯಾಸ ಮಾಡಿ ಬಳಿಕ ಮೂರು ವರ್ಷದಿಂದ ಮನೆಯಲ್ಲಿಯೇ ಇದ್ದಳು.

ಜೂ.20ರಂದು ಬೆಳಗ್ಗೆ ಮನೆಯಿಂದ  ಹೊರಗೆ ಹೋದವಳು ಇದುವರೆಗೆ ಮನೆಗೆ ಬಾರದೇ, ಬೇಲೂರು ತಾಲೂಕಿನ ಹಗರೆ ಎಂಬಲ್ಲಿಗೂ ಹೋಗದೆ ನಾಪತ್ತೆಯಾಗಿದ್ದಾಳೆ.  ಈಕೆಯ ಸಂಬಂಧಿಕರೋರ್ವನನ್ನು ಪ್ರೀತಿಸುತ್ತಿದ್ದು ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು  ಇಬ್ಬರು ಜೊತೆಗೆ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಈ ಬಗ್ಗೆ  ಸಹೋದರ ಸುನಿಲ್ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!