Wednesday, June 24, 2026
Homeಕರಾವಳಿಮಂಗಳೂರುಮಂಗಳೂರು: ಬಜಾಲ್ ಕಟ್ಟಪುಣಿಯಲ್ಲಿ ವಾಸವಾಗಿದ್ದ ಯುವತಿ ನಾಪತ್ತೆ

ಮಂಗಳೂರು: ಬಜಾಲ್ ಕಟ್ಟಪುಣಿಯಲ್ಲಿ ವಾಸವಾಗಿದ್ದ ಯುವತಿ ನಾಪತ್ತೆ

- Advertisement -
- Advertisement -

ಮಂಗಳೂರು: ಬಜಾಲ್ ಕಟ್ಟಪುಣಿಯಲ್ಲಿ ವಾಸವಾಗಿದ್ದ ಯುವತಿ ನಾಪತ್ತೆಯಾಗಿದ್ದಾಳೆ.ಕೊಪ್ಪಳ ಮೂಲದ ಶಿವಪುತ್ರಪ್ಪ ಎಂಬವರ ಪುತ್ರಿ ಯಲ್ಲಮ್ಮ (18) ಎ.14ರಂದು ಮನೆಯಿಂದ ನಾಪತ್ತೆಯಾಗಿದ್ದಾಳೆ.

ಯುವತಿಯ ತಂದೆ ಶಿವಪುತ್ರಪ್ಪ ಬೆಳಗ್ಗೆ 7ಕ್ಕೆ ಉಳ್ಳಾಲ ಆಜಾದ್ ನಗರಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು ಅವರ ಪತ್ನಿ ಕೂಡ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಪುತ್ರಿ ಯಲ್ಲಮ್ಮ ಮನೆಯಲ್ಲಿದ್ದಳು. ಸಂಜೆ ಬಂದು ನೋಡಿದಾಗ ಮನೆಗೆ ಬೀಗ ಹಾಕಿದ್ದು ಯಲ್ಲಮ್ಮ ಮನೆಯಲ್ಲಿ ಇರಲಿಲ್ಲ. ಬೀಗದ ಕೈ ಪಕ್ಕದಲ್ಲಿತ್ತು. ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಎಲ್ಲ ಕಡೆ ಹುಡುಕಾಡಿದರೂ ಆಕೆ ಪತ್ತೆಯಾಗಿಲ್ಲ. 4 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಪೂರ ಶರೀರ, ದುಂಡು ಮುಖ ಚೂಡಿದಾರ ಧರಿಸಿದ್ದು, ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ಈ ಯುವತಿ ಪತ್ತೆಯಾದಲ್ಲಿ ಕಂಕನಾಡಿ ನಗರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!