- Advertisement -
- Advertisement -
ಉಡುಪಿ: ಮನೆಯಿಂದ ಹೊರಗೆ ಹೋದ ಯುವತಿ ಮನೆ ಬಾರದೆ ನಾಪತ್ತೆಯಾಗಿರುವ ಘಟನೆ ಕಾಪುವಿನ ಕೊಪ್ಪಲಂಗಡಿಯಲ್ಲಿ ನಡೆದಿದೆ. ಕಾಪು ತಾಲೂಕಿನ ನಿವಾಸಿ ಸಾನಿಯಾ ನಿಝ (20) ನಾಪತ್ತೆಯಾದ ಯುವತಿ.
ಸಾನಿಯಾ ನಿಝ ಕಾಪುವಿನ ಕೊಪ್ಪಲಂಗಡಿ ಹೈವೇ ಹತ್ತಿರದಲ್ಲಿರುವ ಜ್ಯೂಸ್ ಅಂಗಡಿಯಲ್ಲಿ ತಾಯಿಗೆ ಸಹಾಯ ಮಾಡಲು ಹೋಗುತ್ತಿದ್ದು ಎಂಬ ಯುವತಿಯು ಮಾರ್ಚ್ 2 ರಂದು ಮನೆಯಿಂದ ಹೊರಗೆ ಹೋದವಳು ವಾಪಾಸು ಬಾರದೇ ನಾಪತ್ತೆಯಾಗಿದ್ದಾಳೆ.
5 ಅಡಿ 5 ಇಂಚು ಎತ್ತರ, ಗೋಧಿಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ, ಬ್ಯಾರಿ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರತಲ್ಲಿ ಕಾಪು ಪೊಲೀಸ್ ಠಾಣೆ: 0820-2551033, ಕಾಪು ವೃತ್ತ ನಿರೀಕ್ಷಕರ ಕಛೇರಿ: 0820-2572333, ಪೊಲೀಸ್ ಉಪಾಧೀಕ್ಷಕರ ಕಚೇರಿ: 08258-231333, ಪೊಲೀಸ್ ಅಧೀಕ್ಷಕರ ಕಛೇರಿ: 0820-2534777 ಅಥವಾ ಜಿಲ್ಲಾ ನಿಸ್ತಂತು ಕೊಠಡಿ:0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಪು ಪೊಲೀಸ್ ಠಾಣಾಧಿಕಾರಿ ಕಛೇರಿ ಪ್ರಕಟಣೆ ತಿಳಿಸಿದೆ
- Advertisement -