Sunday, June 7, 2026
Homeಕರಾವಳಿಯುವಕನಿಂದ ಯುವತಿಗೆ ನಿರಂತರ ಕಿರುಕುಳ ಆರೋಪ;  ಕಾಸರಗೋಡಿನಲ್ಲಿ ಡೆತ್ ನೋಟು ಬರೆದಿಟ್ಟು ಯುವತಿ ಆತ್ಮಹತ್ಯೆ

ಯುವಕನಿಂದ ಯುವತಿಗೆ ನಿರಂತರ ಕಿರುಕುಳ ಆರೋಪ;  ಕಾಸರಗೋಡಿನಲ್ಲಿ ಡೆತ್ ನೋಟು ಬರೆದಿಟ್ಟು ಯುವತಿ ಆತ್ಮಹತ್ಯೆ

- Advertisement -
- Advertisement -

ಕಾಸರಗೋಡು: ಯುವಕನಿಂದ ಯುವತಿಗೆ ನಿರಂತರ ಕಿರುಕುಳದಿಂದ ಬೇಸತ್ತು  ಯುವತಿಯೊಬ್ಬಳು ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡಿನ ಅಡೂರಿನಲ್ಲಿ ನಡೆದಿದೆ.

ಅಡೂರು ಚಾಮಕೊಚ್ಚಿ ಅನ್ನಪ್ಪಾಡಿಯ ಮುದ್ದ ನಾಯ್ಕ್ ರವರ ಪುತ್ರಿ ದಿವ್ಯಾ (26) ಆತ್ಮಹತ್ಯೆ ಮಾಡಿಕೊಂಡಾಕೆ.ದಿವ್ಯಾ ಬಂದಡ್ಕದ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.ನಿನ್ನೆ ದಿವ್ಯಾ ಮನೆಯ ಕೋಣೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದಿವ್ಯಾ ಮಂಗಳವಾರ ರಾತ್ರಿ ಲ್ಯಾಬ್ ನಲ್ಲಿ ಕೆಲಸ ಮುಗಿಸಿ ಬುಧವಾರ ಬೆಳಿಗ್ಗೆ ಮನೆಗೆ ಬಂದಿದ್ದರು.

ತಾಯಿ ಹಾಗೂ ಮನೆ ಮಂದಿ ಹೊರಗಡೆ ತೆರಳಿದ್ದರು. ಸಂಜೆ ಸ್ಥಳೀಯರು ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.ದಿವ್ಯಾಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ ಈ ವೇಳೆ ಅವರು ಮೃತಪಟ್ಟಿದ್ದರು.ಸ್ಥಳದಲ್ಲಿ ದಿವ್ಯಾಳ ಡೆತ್ ನೋಟ್  ಪೊಲೀಸರಿಗೆ ಲಭಿಸಿದ್ದು ಅದರಲ್ಲಿ  ಯುವಕನೊಬ್ಬನ ನಿರಂತರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದಾಗಿ ತಿಳಿಸಿದ್ದಾರೆ. ಅದರಂತೆ  ಅಡೂರು ಪೊಲೀಸರು ತನಿಖೆ ಅರಂಭಿಸಿದ್ದಾರೆ.

- Advertisement -

Latest News

error: Content is protected !!