Sunday, June 7, 2026
Homeಕರಾವಳಿಕಡಬದಲ್ಲಿ ಆಟೋ ರಿಕ್ಷಾ ಮತ್ತು ಕಾರು ನಡುವೆ ಡಿಕ್ಕಿ; ಇಬ್ಬರು ಮಹಿಳೆಯರಿಗೆ ಗಾಯ

ಕಡಬದಲ್ಲಿ ಆಟೋ ರಿಕ್ಷಾ ಮತ್ತು ಕಾರು ನಡುವೆ ಡಿಕ್ಕಿ; ಇಬ್ಬರು ಮಹಿಳೆಯರಿಗೆ ಗಾಯ

- Advertisement -
- Advertisement -

ಕಡಬ: ಆಟೋ ರಿಕ್ಷಾ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ಮರ್ದಾಳ ಸಮೀಪದ  ಐತ್ತೂರು ಗ್ರಾಮದ ಸುಂಕದಕಟ್ಟೆ ಜಂಕ್ಷನ್‌ನಲ್ಲಿ ನಡೆದಿದೆ.

ರಿಕ್ಷಾದಲ್ಲಿದ್ದ ಬಿಳಿನೆಲೆಯ ಕಮಲಾ, ಶ್ರೀಕೃಪಾ ಗಾಯಗೊಂಡಿದ್ದಾರೆ. ಕುಟ್ರುಪ್ಪಾಡಿ ಗ್ರಾಮದ ಕಳಾರ ನಿವಾಸಿ ಅಶ್ರಫ್ ಎಂಬವರು ತನ್ನ ಆಟೋ ರಿಕ್ಷಾದಲ್ಲಿ ಬಿಳಿನೆಲೆಯಿಂದ ಕಡಬಕ್ಕೆ ಪ್ರಯಾಣಿಕರನ್ನು ಕೂರಿಸಿಕೊಂಡು ಬರುತ್ತಿದ್ದ ವೇಳೆ ಕಡಬ ಮರ್ದಾಳ ಕಡೆಯಿಂದ ಬರುತ್ತಿದ್ದ ಬ್ರೀಝಾ ಮತ್ತು ರಿಕ್ಷಾ ನಡುವೆ ಸುಂಕದಕಟ್ಟೆ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ.

ಪರಿಣಾಮ ಆಟೋ ರಿಕ್ಷಾ ರಸ್ತೆಯ ಎಡಬದಿಗೆ ಮಗುಚಿ ಬಿದ್ದು  ಆಟೋ ರಿಕ್ಷಾ ಚಾಲಕ ಅಪಾಯದಿಂದ ಪಾರಾಗಿದ್ದಾರೆ.  ರಿಕ್ಷಾದಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ.  ಗಾಯಾಳುಗಳು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ರಿಕ್ಷಾ ಚಾಲಕ ನೀಡಿರುವ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!