Thursday, January 21, 2021
Home ತಾಜಾ ಸುದ್ದಿ ಚಾಕುವಿನಿಂದ ಇರಿದು ಕೊಲೆಯತ್ನ !..- ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ ಯುವಕ

ಚಾಕುವಿನಿಂದ ಇರಿದು ಕೊಲೆಯತ್ನ !..- ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ ಯುವಕ

- Advertisement -
- Advertisement -

ಬೆಂಗಳೂರು:ಇಲ್ಲಿನ ಗಂಗೊಂಡನಹಳ್ಳಿಯ ಮಸೀದಿ ಬಳಿ ಯುವಕ ನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.ಮೃತನನ್ನು ಗಂಗೊಂಡನಹಳ್ಳಿ ನಿವಾಸಿ ವೆಲ್ಡಿಂಗ್ ಕೆಲಸ ಮಾಡುವ ಅಬ್ದುಲ್ ಸಾಹಿಲ್ (22) ಎಂದು ಗುರುತಿಸಲಾಗಿದೆ.

ಆರಂಭದಲ್ಲಿ ನಾಲ್ಕೈದು ಮಂದಿ ಹುಡುಗರು ಸೇರಿಕೊಂಡು ಅಬ್ದುಲ್ ಸಾಹಿಲ್‍ನೊಂದಿಗೆ ಜಗಳ ತೆಗೆದು ನಂತರ ಜಗಳ ತಾರಕಕ್ಕೇರಿ ಚಾಕುವಿನಿಂದ ಆತನ ಹೊಟ್ಟೆ, ಸೊಂಟ ಮುಂತಾದ ಕಡೆ ಇರಿದಿದ್ದಾರೆ. ಕೊಲೆಗೆ ನಿಖರ ಕಾರಣ ತನಿಖೆ ನಂತರ ತಿಳಿಯಬೇಕಿದೆ.ತೀವ್ರ ಗಾಯಗೊಂಡಿದ್ದ ಸಾಹಿಲ್ ಕೆಂಪೇಗೌಡ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಈ ಕುರಿತು ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

- Advertisement -
- Advertisment -

Latest News

error: Content is protected !!