Thursday, January 21, 2021
Home ತಾಜಾ ಸುದ್ದಿ ಮುಂಬೈನ ಧಾರಾವಿಯಲ್ಲೊಂದು ಭೀಕರ ಘಟನೆ- ಲಿಫ್ಟ್​ನಲ್ಲಿ ಸಿಲುಕಿ ಸಾವನ್ನಪ್ಪಿದ ಐದು ವರ್ಷದ ಕಂದಮ್ಮ!..

ಮುಂಬೈನ ಧಾರಾವಿಯಲ್ಲೊಂದು ಭೀಕರ ಘಟನೆ- ಲಿಫ್ಟ್​ನಲ್ಲಿ ಸಿಲುಕಿ ಸಾವನ್ನಪ್ಪಿದ ಐದು ವರ್ಷದ ಕಂದಮ್ಮ!..

- Advertisement -
- Advertisement -

ಮುಂಬೈ:ಇಲ್ಲಿನ ಧಾರಾವಿಯ ಘೋಶಿ ಶೆಲ್ಟರ್​ ಬಿಲ್ಡಿಂಗ್​ನಲ್ಲಿ ಲಿಫ್ಟ್​ ಬಳಸುವವೇಳೆ ಪೋಷಕರ ಅಜಾಗರೂಕತೆಯಿಂದಾಗಿ ಐದು ವರ್ಷದ ಪುಟ್ಟ ಬಾಲಕ ಲಿಫ್ಟ್​ನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂರು ಮಕ್ಕಳು ಆಟವಾಡುತ್ತಾ, ಗ್ರೌಂಡ್​ ಫ್ಲೋರ್​ನಿಂದ ನಾಲ್ಕನೇ ಫ್ಲೋರ್​ಗೆ ಹೊರಟಿದ್ದರು.

ಆದರೆ ಗ್ರೌಂಡ್​ ಫ್ಲೋರ್​ ನಿಂದ ನಾಲ್ಕನೇ ಫ್ಲೋರ್ ತಲುಪಿ ಹೊರಬರುವಾಗ ಒಬ್ಬೊಬ್ಬರಾಗಿ ಲಿಫ್ಟ್​ನಿಂದ ಹೊರಬಂದಿದ್ದಾರೆ ಇಬ್ಬರು ಮಕ್ಕಳು ಬಂದ ನಂತರ, ಐದು ವರ್ಷದ ಬಾಲಕ ಹೊರಬರುವಾಗ ಲಿಫ್ಟ್​ನ ಮೊದಲನೇ ಬಾಗಿಲು ಮುಚ್ಚಿದೆ ನಂತರ ಕಬ್ಬಿಣದ ಸರಳಿದ್ದ ಬಾಗಿಲು ಮತ್ತು ಮರದ ಬಾಗಿಲು ಎರಡೂ ಮುಚ್ಚಿದೆ.

ಈ ದೃಶ್ಯಾವಳಿ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎರಡೂ ಬಾಗಿಲ ಮಧ್ಯದಲ್ಲಿ ಬಾಲಕ ಸಿಲುಕಿ ಲಿಫ್ಟ್ ಚಲಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -
- Advertisment -

Latest News

error: Content is protected !!