Sunday, May 5, 2024
Homeತಾಜಾ ಸುದ್ದಿಕಾಡು ಪ್ರಾಣಿಗಳಿಂದ ಬೆಲೆ ರಕ್ಷಿಸಲು ಈ ರೈತ ಮಾಡಿದ್ದೇನು ಗೊತ್ತಾ...? ಈ ಸ್ಟೋರಿ ಓದಿ

ಕಾಡು ಪ್ರಾಣಿಗಳಿಂದ ಬೆಲೆ ರಕ್ಷಿಸಲು ಈ ರೈತ ಮಾಡಿದ್ದೇನು ಗೊತ್ತಾ…? ಈ ಸ್ಟೋರಿ ಓದಿ

spot_img
- Advertisement -
- Advertisement -

ತೆಲಂಗಾಣ: ಮಂಗ ಮತ್ತು ಕಾಡುಹಂದಿಗಳಿಂದ ಬೆಳೆಯನ್ನು ರಕ್ಷಿಸಲು ವ್ಯಕ್ತಿಯೊಬ್ಬನಿಗೆ ಸಂಬಳ ನೀಡಿ ಕರಡಿ ವೇಷ ಹಾಕಿಸಿ ತಮ್ಮ ಹೊಲದಲ್ಲಿ ನಿಲ್ಲಿಸಿ ಬೆಳೆ ರಕ್ಷಿಸುತ್ತಿರುವ ವಿಚಾರ ಸುದ್ದಿಯಾಗಿದೆ.

ಕೋತಿಗಳು ಮತ್ತು ಕಾಡುಹಂದಿಗಳು ಬೆಳೆ ಹಾನಿ ಮಾಡುವುದನ್ನು ತಡೆಯಲು ತೆಲಂಗಾಣದ ಸಿದ್ದಿಪೇಟೆಯ ಕೋಹೆಡದ ರೈತ ಭಾಸ್ಕರ್ ರೆಡ್ಡಿ ಕರಡಿಯ ವೇಷ ಧರಿಸಿ ಹೊಲದಲ್ಲಿ ಓಡಾಡಲು ವ್ಯಕ್ತಿಯನ್ನು ನೇಮಿಸಿದ್ದಾರೆ.

ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಕರಡಿ ವೇಷ ಧರಿಸಿ ಓಡಾಡುವ ವ್ಯಕ್ತಿಗೆ ದಿನಕ್ಕೆ 500 ರೂ. ವೇತನವನ್ನೂ ನಿಗದಿ ಮಾಡಲಾಗಿದೆಯಂತೆ.

ಸದ್ಯ ಜಾಲತಾಣದಲ್ಲಿ ಈ ಸುದ್ದಿ ಹೆಚ್ಚು ಸುದ್ದಿಯಾಗುತ್ತಿದೆ. ಈ ಮಧ್ಯೆ ಕೆಲ ನೆಟ್ಟಿಗರು ಏನೇ ಆದರೂ ಪ್ರಾಣಿಗಳನ್ನು ನಿಯಂತ್ರಣಗೊಳಿಸಲು ಸಾಧ್ಯವೇ ಎಂದು ಪ್ರಶ್ನಿಸಿ ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಕರಡಿ ವೇಷ ಹಾಕಿಕೊಳ್ಳಲು ತಿಂಗಳಿಗೆ 15,000 ರೂ. ಸಂಬಳವೇ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಈ ಕರಡಿ ವೇಷದ ಉಪಾಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!