Thursday, May 23, 2024
Homeಕರಾವಳಿಬಂಟ್ವಾಳ: ಸುಳ್ಳ ಮಲೆ ತೀರ್ಥ ಸ್ನಾನಕ್ಕೆ ಏಣಿ ಮುಹೂರ್ತ; ಗುಹಾತೀರ್ಥ ಸ್ನಾನಕ್ಕೆ ನಿರ್ಬಂಧ!

ಬಂಟ್ವಾಳ: ಸುಳ್ಳ ಮಲೆ ತೀರ್ಥ ಸ್ನಾನಕ್ಕೆ ಏಣಿ ಮುಹೂರ್ತ; ಗುಹಾತೀರ್ಥ ಸ್ನಾನಕ್ಕೆ ನಿರ್ಬಂಧ!

spot_img
- Advertisement -
- Advertisement -

ಬಂಟ್ವಾಳ: ಸೋಣ ಅಮವಾಸ್ಯೆಯ ದಿನದಿಂದ ಬಾದ್ರಪದ ಶುಕ್ಲ ಚೌತಿ ಹಬ್ಬದ ದಿನದವರೆಗೆ ಸುಳ್ಳ ಮಲೆ ತೀರ್ಥ ಸ್ನಾನಕ್ಕೆ ಪೂರ್ವಭಾವಿಯಾಗಿ ಬಿದಿರಿನ ಕೇರ್ಪು ( ಏಣಿ) ಇಡುವ ಸಂಪ್ರದಾಯ ಸೋಮವಾರದಂದು ರಂದು ನಡೆಯಿತು.

ಸರಕಾರದ ಸುತ್ತೋಲೆಯಂತೆ ಈ ಬಾರಿ ಸರಳವಾಗಿ ಭಕ್ತಾದಿಗಳಿಗೆ ಗುಹಾತೀರ್ಥ ಸ್ನಾನಕ್ಕೆ ಅವಕಾಶ ನೀಡದೆ ಅನಾಧಿಕಾಲದಿಂದ ನಡೆದು ಬಂದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.

ನಮ್ಮ ತುಳುನಾಡಿನಲ್ಲಿ ಅತ್ಯಂತ ಅಪರೂಪದ ವಿಶಿಷ್ಟ ತೀರ್ಥ ಕ್ಷೇತ್ರ ಎನಿಸಿದ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಸುಳ್ಳಮಲೆ ಗುಹಾ ತೀರ್ಥಕ್ಕೆ ಪ್ರಾರ್ಥನೆ ಸಲ್ಲಿಸಿ,ಕೇರ್ಪು ಇಟ್ಟು ಧಾರ್ಮಿಕ ವಿಧಿ-ವಿಧಾನವನ್ನು ನೆರವೇರಿಸಿ ಅರಸು ಗುಡ್ಡೆಚಾಮುಂಡಿ ಮತ್ತು ಪ್ರಧಾನಿ ಪಂಜುರ್ಲಿ ದೈವಗಳಿಗೆ ತಂಬಿಲ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ದೈವದ ಅರ್ಚಕರಾದ ಪಳನೀರು ಅನಂತ ಭಟ್ ಹರಿ ಭಟ್ ,ಮಾಣಿಗುತ್ತು ಸಚಿನ್ ರೈ, ಮತ್ತು ಗ್ರಾಮಸ್ತರು ಸೀಮಿತ ಸಂಖ್ಯೆಯಲ್ಲಿ ಉಪಸ್ತಿತರಿದ್ದರು

ಸೋಮವಾರದಿಂದ ಶುಕ್ರವಾರ ಬಾದ್ರಪದ ಚೌತಿವರೆಗೆ ಗುಹಾ ತೀರ್ಥ ಸ್ನಾನಕ್ಕೆ ಭಕ್ತಾದಿಗಳಿಗೆ ಮುಕ್ತ ಅವಕಾಶ ಇರುತಿತ್ತು .ಕೋವಿಡ್-19 ಪ್ರತಿಬಂಧಕಾಜ್ಞೆಯ ಕಾರಣದಿಂದ ಭಕ್ತಾಧಿಗಳಿಗೆ ಗುಹಾ ಪ್ರವೇಶ ಹಾಗು ಗುಹಾತೀರ್ಥ ಸ್ನಾನ ಮಾಡುವುದು ಸಂಪೂರ್ಣವಾಗಿ ನಿಷೇಧಿಸಿರುವುದು ಪ್ರತೀ ವರ್ಷ ಬರುವ ಅಸಂಖ್ಯ ಭಕ್ತಾದಿಗಳಿಗೆ ಈ ವರ್ಷದ ಮಟ್ಟಿಗೆ ನಿರಾಸೆ ಮೂಡಿಸಿದೆ.

- Advertisement -
spot_img

Latest News

error: Content is protected !!