Thursday, April 25, 2024
Homeಕರಾವಳಿಧರ್ಮ ಮೀರಿ ನಿಂತ ಗಂಡುಕಲೆ- ಹಿಂದೂ ಪುರಾಣ ಕಥೆಯ ಯಕ್ಷಗಾನಕ್ಕೆ ಸಾಕ್ಷಿಯಾಗಿದ್ದು ಮುಸ್ಲಿಂ ಬಾಂಧವರೊಬ್ಬರ ಮನೆ!…

ಧರ್ಮ ಮೀರಿ ನಿಂತ ಗಂಡುಕಲೆ- ಹಿಂದೂ ಪುರಾಣ ಕಥೆಯ ಯಕ್ಷಗಾನಕ್ಕೆ ಸಾಕ್ಷಿಯಾಗಿದ್ದು ಮುಸ್ಲಿಂ ಬಾಂಧವರೊಬ್ಬರ ಮನೆ!…

spot_img
- Advertisement -
- Advertisement -

ಮಂಗಳೂರು:ಮಾನವೀಯತೆ ಮತ್ತು ಪರಸ್ಪರ ಪ್ರೀತಿ ಎಂಬುದು ಧರ್ಮ ಜಾತಿಗಳನ್ನೂ ಮೀರಿದ್ದು. ಇದಕ್ಕೆ ಸಾಕ್ಷಿ ಎಂಬಂತೆ ಹಿಂದೂ ಕುಟುಂಬ ಆಯೋಜಿಸಿದ ಯಕ್ಷಗಾನಕ್ಕೆ ಮುಸ್ಲಿಂ ಬಾಂಧವರೊಬ್ಬರ ಮನೆ ಎದುರಿನ ಅಂಗಳದಲ್ಲಿ ವೇದಿಕೆ ನಿರ್ಮಿಸಿ, ಪ್ರದರ್ಶನ ನಡೆಸಿದ ಘಟನೆ ವರದಿಯಾಗಿದೆ. ಮಂಗಳೂರು ಹೊರವಲಯದ ಕಿನ್ನಿಗೋಳಿಯಲ್ಲಿ ಹಿಂದೂ ದೇವರು,ಇತರ ಪೌರಾಣಿಕ ಪಾತ್ರಗಳ ಸುಮಾರು ಮೂರು ಗಂಟೆಗಳ ‘ಶಮಂತಕ ರತ್ನ’ ಯಕ್ಷಗಾನ ಪ್ರಸಂಗ ನಡೆಯಿತು.

ಎರಡು ಕುಟುಂಬಗಳು ಕೋಮು ಸೌಹಾರ್ದತೆಯಿಂದ ಯಕ್ಷಗಾನಕ್ಕೆ ಸಾಕ್ಷಿಯಾದವು. ನಾಗೇಶ್‌ ಎಂಬವರು ಕಿನ್ನಿಗೋಳಿಯಲ್ಲಿ ಕಟ್ಟಿಸಿದ ನೂತನ ಮನೆಯ ಗೃಹಪ್ರವೇಶಕ್ಕೆ ‘ಶಮಂತಕ ರತ್ನ’ ಯಕ್ಷಗಾನ ಆಯೋಜಿಸಲಾಗಿತ್ತು. ಆದರೆ ಅವರ ಮನೆ ಆವರಣದಲ್ಲಿ ಯಕ್ಷಗಾನ ನಡೆಸಲು ಜಾಗದ ಕೊರತೆಯಾಗಿತ್ತು. ಪಕ್ಕದ ಮನೆಯವರೇ ಆದ ಅಬ್ದುಲ್‌ ರಜಾಕ್‌ ತಮ್ಮ ಮನೆಯಂಗಳದಲ್ಲಿ ಅವಕಾಶ ಮಾಡಿಕೊಟ್ಟು ಹಿಂದೂ ಪೌರಾಣಿಕ ಯಕ್ಷಗಾನವು ಮುಸ್ಲಿಂ ಬಂಧುವಿನ ಮನೆಯಂಗಳದಲ್ಲಿ ರಂಗೇರಿತು.

- Advertisement -
spot_img

Latest News

error: Content is protected !!