Sunday, May 5, 2024
Homeತಾಜಾ ಸುದ್ದಿಅತ್ಯಾಚಾರಿಗಳಿಗೆ ಪಾಕ್ ನೀಡಲು ಹೊರಟಿರುವ ಶಿಕ್ಷೆ ಏನು ಗೊತ್ತಾ? 'ಕೆಮಿಕಲ್ ಕ್ಯಾಸ್ಟ್ರೇಷನ್'ಗೆ ಸಮ್ಮತಿ ಇತ್ತ ಪಾಕ್

ಅತ್ಯಾಚಾರಿಗಳಿಗೆ ಪಾಕ್ ನೀಡಲು ಹೊರಟಿರುವ ಶಿಕ್ಷೆ ಏನು ಗೊತ್ತಾ? ‘ಕೆಮಿಕಲ್ ಕ್ಯಾಸ್ಟ್ರೇಷನ್’ಗೆ ಸಮ್ಮತಿ ಇತ್ತ ಪಾಕ್

spot_img
- Advertisement -
- Advertisement -

ಕರಾಚಿ: ವಿಶ್ವದಾದ್ಯಂತ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗೆ ಕೊಡಬಹುದಾದ ಶಿಕ್ಷೆಯ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಮಹಿಳಾ ಸಂಘಟನೆಗಳು ಸೇರಿದಂತೆ ಬಹುತೇಕರು ಹಿಂದಿನಿಂದಲೇ ಅತ್ಯಾಚಾರಿಯ ದೇಹದ ಭಾಗವನ್ನೇ ಕಟ್​ ಮಾಡುವ ಶಿಕ್ಷೆ ಸಮರ್ಪಕ ಎನ್ನುತ್ತಿದ್ದಾರೆ. ಇದಕ್ಕೆ ಪಾಕ್ ಸಮ್ಮತಿ ನೀಡಿದೆ. ಘೋರವಾದ ಶಿಕ್ಷೆ ನೀಡಲು ಹೊರಟಿರುವ ಪಾಕಿಸ್ತಾನ ‘ಕೆಮಿಕಲ್ ಕ್ಯಾಸ್ಟ್ರೇಷನ್’ಗೆ ಒಪ್ಪಿಗೆ ನೀಡಿದೆ. ಇದರ ಪ್ರಕಾರ ರಾಸಾಯನಿಕ ಬಳಸಿ ವೃಷಣಬೀಜ ಒಡೆದು ಶಿಕ್ಷೆ ನೀಡಲಾಗುತ್ತದೆ.

ಈ ಕಾನೂನಿಗೆ ಪ್ರಧಾನಿ ಇಮ್ರಾನ್ ಖಾನ್ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಪಾಕಿಸ್ತಾನವೂ ಇದಕ್ಕೆ ಮುಂದಾಗಿರುವುದಾಗಿ ವರದಿಯಾಗಿದೆ. ಅತ್ಯಾಚಾರಿಯ ವೃಷಣವನ್ನು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿ, ಆತ ಇನ್ನೆಂದೂ ಸೆಕ್ಸ್​ ಮಾಡುವ ಸಾಹಸಕ್ಕೆ ಕೈಹಾಕದಂತೆ ಮಾಡಲಾಗುತ್ತದೆ. ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾದ ಅಪರಾಧಿ ಎಂದಿಗೂ ಲೈಂಗಿಕ ಕ್ರಿಯೆ ನಡೆಸಲು ಶಕ್ತನಾಗುವುದಿಲ್ಲ. ಈ ನಿರ್ಧಾರವನ್ನು ಹಲವು ರಾಷ್ಟ್ರಗಳು ಸರಿ ಎಂದು ಹೇಳುತ್ತಿವೆ.

- Advertisement -
spot_img

Latest News

error: Content is protected !!