Wednesday, May 15, 2024
Homeಕರಾವಳಿಉಡುಪಿಕುಂದಾಪುರ: ಯಕ್ಷಗಾನ ಹೆಜ್ಜೆ ತರಬೇತಿ ಉದ್ಘಾಟನೆ

ಕುಂದಾಪುರ: ಯಕ್ಷಗಾನ ಹೆಜ್ಜೆ ತರಬೇತಿ ಉದ್ಘಾಟನೆ

spot_img
- Advertisement -
- Advertisement -

ಕುಂದಾಪುರ:  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಬಾಡಿ ಮೂರಕೈಯಲ್ಲಿ ಸ್ಮಾರ್ಟ್ ಕ್ರಿಯೇಶನ್ ಎಜ್ಯುಕೇಶನ್ ಟ್ರಸ್ಟ್(ರಿ)ಸದ್ಗುರು ಕುಟೀರ ಹೈಕಾಡಿ ಇದರ ವತಿಯಿಂದ ಆಯೋಜಿಸಿದ ಯಕ್ಷಗಾನ ಹೆಜ್ಜೆ ಕುಣಿತ ತರಬೇತಿ ಕಾರ್ಯಕ್ರವನ್ನು ಬೆಳ್ವೆ ಗ್ರಾಮ ಪಂಚಾಯತ್ ಸದಸ್ಯರಾದ ಕರುಣಾಕರ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. 

ನಮ್ಮ ಸಂಸ್ಥೆಯ ವಿದ್ಯಾರ್ಥಿ ಗಳಿಗೆ ಪ್ರಯೋಜನವಾಗಲಿ, ಹಾಗೂ ಸುತ್ತಮುತ್ತಲಿನ ಮಕ್ಕಳಿಗೆ ಯಕ್ಷಗಾನ ದ ಆಸಕ್ತಿ ಉಳ್ಳವರಿಗೆ ಸುಲಭವಾಗಿ ದೊರಕುವಂತೆ ಸ್ಮಾರ್ಟ್ ಕ್ರಿಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ ಶ್ರಮಿಸುತ್ತದೆ ಎಂದು  ಸಂಸ್ಥೆಯ ಮುಖ್ಯೋಪಾಧ್ಯಾಯರು ಶ್ರೀ ಹಿರಿಯಣ್ಣ ನಾಯ್ಕ ಹೇಳಿದರು.

ಸ್ಮಾರ್ಟ್ ಕ್ರಿಯೇಶನ್ ಎಜ್ಯುಕೇಶನ್ ಟ್ರಸ್ಟ್(ರಿ)ನ ಅಧ್ಯಕ್ಷರು ಶ್ರೀ ಕೃಷ್ಣ ಮೂರ್ತಿ ಹೈಕಾಡಿಯವರು ಮಾತನಾಡಿ ಶೈಕ್ಷಣಿಕ ಹಲವಾರು ಚಟುವಟಿಕೆಗಳನ್ನು ಮಾಡುವುದು ಟ್ರಸ್ಟ್ ನ ಉದ್ದೇಶವಾಗಿದೆ.ಸಮಾಜದ ಎಲ್ಲಾ ಕ್ಷೇತ್ರದಲ್ಲಿ ನಮ್ಮ ಟ್ರಸ್ಟ್ ಸಮಾಜ ಉಪಯುಕ್ತ ಕಾರ್ಯಕ್ರಮ ವನ್ನು ಮಾಡಲು ನಿರ್ಧರಿಸಿದೆ ಎಂದರು . ನವೀನ್ ಕೋಟ ಯಕ್ಷಗಾನ ಹೆಜ್ಜೆ ತರಬೇತುದಾರರು , ಶ್ರೀ ಪ್ರವೀಣ್ ಪೂಜಾರಿ ಅಧ್ಯಕ್ಷರು  ಶಾಲಾಭಿವೃದ್ಧಿ ಸಮಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಬಾಡಿ ಮೂರಕೈ , ಶ್ರೀಮತಿ ಪಾರ್ವತಿ ಉಪಾಧ್ಯಕ್ಷೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಬಾಡಿ ಮೂರಕೈ , ಶ್ರೀ ಅನ್ವರ್ ಹುಸೇನ್‌ ಅಧ್ಯಕ್ಷರು ಹ.ವಿ.ಸಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಬಾಡಿ ಮೂರಕೈ , ಶ್ರೀ ದಿನಕರ ಪೂರ್ವ ವಿದ್ಯಾರ್ಥಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಬಾಡಿ ಮೂರಕೈ   ಈ ವೇಳೆ ಉಪಸ್ಥಿತರಿದ್ದರು. ಸರಸ್ವತಿ  ಕಾರ್ಯಕ್ರಮ ನಿರೂಪಣೆ ಮಾಡಿದರು, ಅಮೃತ ಭಾರತಿ ವಿದ್ಯಾಲಯ ಹೆಬ್ರಿ ಪ್ರೌಢಶಾಲಾ ವಿಭಾಗದ ಉಪಮುಖ್ಯೋಪಾಧ್ಯಾಯರು ಹಾಗೂ ಸ್ಮಾರ್ಟ್ ಕ್ರಿಯೇಶನ್ ಎಜ್ಯುಕೇಶನ್ ಟ್ರಸ್ಟ್(ರಿ) ನ ಕಾರ್ಯದರ್ಶಿ  ಮಹೇಶ ಹೈಕಾಡಿ ವಂದಿಸಿದರು.ಸು ಮಾರು 60ವಿದ್ಯಾರ್ಥಿಗಳು ತರಬೇತಿ ಗೆ ಹಾಜರಾಗಿದ್ದರು.

- Advertisement -
spot_img

Latest News

error: Content is protected !!