Saturday, June 6, 2026
Homeಕರಾವಳಿಉಡುಪಿಪೆರ್ಡೂರು: ಡೆತ್ ನೋಟ್ ಬರೆದಿಟ್ಟು ನವ ವಿವಾಹಿತೆ ಆತ್ಮಹತ್ಯೆ..!

ಪೆರ್ಡೂರು: ಡೆತ್ ನೋಟ್ ಬರೆದಿಟ್ಟು ನವ ವಿವಾಹಿತೆ ಆತ್ಮಹತ್ಯೆ..!

- Advertisement -
- Advertisement -

ಪೆರ್ಡೂರಿನಲ್ಲಿ ಡೆತ್ ನೋಟ್ ಬರೆದಿಟ್ಟು ನವ ವಿವಾಹಿತೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮಧ್ಯಾಹ್ನದ ವೇಳೆ ಮಾಲತಿಯವರು ತಮಗೆ ಮಕ್ಕಳಾಗುವುದಿಲ್ಲ ಎಂದು ಬೇಸರದಲ್ಲಿ, ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಲತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಆತ್ಮಹತ್ಯೆಗೂ ಮುನ್ನ ಬರೆದ ಡೆತ್ ನೋಟ್ ನಲ್ಲಿ ನನಗೆ ಗರ್ಭಕೋಶದಲ್ಲಿ ಗಡ್ಡೆಯಿದೆ. ಆದ್ದರಿಂದ ನನಗೆ ಮಕ್ಕಳಾಗಲು ಕಷ್ಟ ಸಾಧ್ಯ. ಹಾಗೆಯೇ ಅಪ್ಪ , ಅತ್ತೆ ತುಂಬಾ ನೆನಪಾಗುತ್ತಿದ್ದಾರೆ. ಜೀವನದಲ್ಲಿ ಜಿಗುಪ್ಪೆಗೊಂಡು ನಾನು ಸಾಯಲು ನಿರ್ಧರಿಸಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಹಾಗೇ ಯಾರನ್ನೂ ದೂಷಿಸಬೇಡಿ. ಕ್ಷಮಿಸಿ ನನ್ನನ್ನು ” ಎಂದು ಬರೆದಿದ್ದಾರೆ.

- Advertisement -

Latest News

error: Content is protected !!