ಬೆಳ್ತಂಗಡಿ : ಪುಂಜಾಲಕಟ್ಟೆಯಿಂದ ಚಾರ್ಮಾಡಿಯ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆಚ್ಚಾರಿ ಕಾಮಗಾರಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವವರಿಗೆ ಗುತ್ತಿಗೆದಾರ ಕಳೆದೆರಡು ತಿಂಗಳಿನಿಂದ ಸಂಬಳ ನೀಡದ ಹಿನ್ನೆಲೆ ಅಸ್ಸಾಂ ಮೂಲದ 30 ರಿಂದ 40 ಜನ ಕಾರ್ಮಿಕರು ಗುತ್ತಿಗೆದಾರರ ವಿರುದ್ಧ ತಿರುಗಿ ಬಿದ್ದಿದ್ದು, ರಾಷ್ಟ್ರೀಯ ಹೆಚ್ಚಾರಿಯ ಗುತ್ತಿಗೆಯನ್ನು ಪಡೆದಿರುವ ದೆಹಲಿ ಮೂಲದ ಡಿ.ಪಿ. ಜೈನ್ ಅವರ ಬೆಳ್ತಂಗಡಿ ತಾಲೂಕಿನ ರೇಷ್ಮೆ ರೋಡ್ ಬಳಿ ಇರುವ ಪ್ಲಾಂಟೇಶನ್‌ನಲ್ಲಿ ಕಾರ್ಮಿಕರು ಜು.19 ರಂದು ಗಲಾಟೆ ಮಾಡಿದ್ದು, ಕೊನೆಗೆ ಬೆಳ್ತಂಗಡಿ ಪೊಲೀಸರು ಮಧ್ಯಸ್ಥಿಕೆ ವಹಿಸಿ ಪ್ರಕರಣ ತಿಳಿಗೊಳಿಸಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮುರುಳಿಧರ್ ನಾಯ್ಕ್ ಮತ್ತು ತಂಡ ಘಟನಾ ಸ್ಥಳಕ್ಕೆ ತೆರಳಿ ಪ್ರಕರಣವನ್ನು ತಾಲ್ಕಾಲಿಕವಾಗಿ ಇತ್ಯರ್ಥಗೊಳಿಸಿದ್ದಾರೆ.ಗುತ್ತಿಗೆದಾರರು ಜು.20 ಶನಿವಾರ ಕಾರ್ಮಿಕರಿಗೆ ಬಾಕಿ ಇರುವ ಎರಡು ತಿಂಗಳ ಸಂಬಳವನ್ನು ನೀಡುವುದಾಗಿ ತಿಳಿಸಿದ್ದು, ಸದಸ್ಯಕ್ಕೆ ಕಾರ್ಮಿಕರು ಸುಮ್ಮನಾಗಿದ್ದಾರೆ.
ಮೊದಲೇ ಅವೈಜ್ಞಾನಿಕ ಮತ್ತು ಆಮೆಗತಿಯಲ್ಲಿ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಇದೀಗ ಗುತ್ತಿಗೆದಾರರ ಬೇಜವಾಬ್ದಾರಿತನದಿಂದ ಮತ್ತಷ್ಟು ವಿಳಂಬವಾಗುದುದೋ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.


