Sunday, June 7, 2026
Homeಅಪರಾಧಹಣಕ್ಕಾಗಿ ಮಾಲೀಕನ ಕೈಕಾಲು ಕಟ್ಟಿ, ಕತ್ತು ಹಿಸುಕಿ ಕೊಂದ ಕೆಲಸಗಾರ

ಹಣಕ್ಕಾಗಿ ಮಾಲೀಕನ ಕೈಕಾಲು ಕಟ್ಟಿ, ಕತ್ತು ಹಿಸುಕಿ ಕೊಂದ ಕೆಲಸಗಾರ

- Advertisement -
- Advertisement -

ಬೆಂಗಳೂರು: ಇಲ್ಲಿನ ಚಾಮರಾಜಪೇಟೆಯ 4ನೇ ಕ್ರಾಸ್‌ನಲ್ಲಿರುವ ಕಿಂಗ್ಸ್ ಎನ್ನೇವ್ ಅಪಾರ್ಟೆಂಟ್‌ನಲ್ಲಿ, ಹಣಕ್ಕಾಗಿ ಕೆಲಸಗಾರ ವೃದ್ಧಮಾಲೀಕನನ್ನು ಭೀಕರವಾಗಿ ಹತ್ಯೆಗೈದಿದ್ದಾನೆ.


ಜುಗ್ಗರಾಜ್ ಜೈನ್(77) ಕೊಲೆಯಾದ ವ್ಯಕ್ತಿ. ಕೆಲಸಗಾರ ಬಿಜೋರಾಮ್ ಆರೋಪಿ, ಕಳೆದ 8 ತಿಂಗಳಿನಿಂದ ಕೆಲಸಕ್ಕೆ ಇದ್ದ ಬಿಜೋರಾಮ್ ಮಂಗಳವಾರ ಮಧ್ಯರಾತ್ರಿ ಸುಮಾರು 12 ಗಂಟೆಗೆ ವೃದ್ಧನ ಕೈ, ಕಾಲು ಕಟ್ಟಿ ಹಾಕಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದಾನೆ. ಜುಗ್ಗರಾಜ್ ಮಗ ಕೆಲಸದ ನಿಮಿತ್ತ ಗೋವಾಗೆ ತೆರಳಿದ್ದರು. ಪತ್ನಿ ತನ್ನ ತಾಯಿ ಮನೆಗೆ ಹೋಗಿದ್ದರು. ಮನೆಯಲ್ಲಿ ಜುಗ್ಗರಾಜ್ ಮಾತ್ರವೇ ಇದ್ದ ಸಂದರ್ಭ ಅಂಗಡಿ ಕೆಲಸಗಾರ ಬಿಜೋರಾಮ್ ಮಾಲೀಕನ ಹತ್ಯೆಗೈದಿದ್ದಾನೆ.

- Advertisement -

Latest News

error: Content is protected !!