Sunday, May 5, 2024
Homeತಾಜಾ ಸುದ್ದಿಕಾಂಗ್ರೆಸ್‌ಗಿಂತ ಆಪ್, ಬಿಜೆಪಿ ಉತ್ತಮ: ಹಾರ್ದಿಕ್ ಪಟೇಲ್

ಕಾಂಗ್ರೆಸ್‌ಗಿಂತ ಆಪ್, ಬಿಜೆಪಿ ಉತ್ತಮ: ಹಾರ್ದಿಕ್ ಪಟೇಲ್

spot_img
- Advertisement -
- Advertisement -

ಅಹಮದಾಬಾದ್: ವಾರದ ಹಿಂದಷ್ಟೇ ಕಾಂಗ್ರೆಸ್ ತೊರೆದಿದ್ದ ಗುಜರಾತ್‌ ಕಾಂಗ್ರೆಸ್‌ ನಾಯಕ ಹಾರ್ದಿಕ್ ಪಟೇಲ್ ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಹಾರ್ದಿಕ್ ಪಟೇಲ್ ನೀಡಿರುವ ಹೇಳಿಕೆ ಅವರು ಬಿಜೆಪಿಗೆ ಸೇರುವುದು ಖಚಿತ ಎನ್ನುವುದಕ್ಕೆ ಸಾಕ್ಷಿ ಎಂಬಂತಿದೆ. ಕೆಲವೇ ತಿಂಗಳಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ಇದೆ. ಹಾರ್ದಿಕ್ ಪಟೇಲ್ ಮುಂದಿನ ರಾಜಕೀಯ ನಡೆ ಬಗ್ಗೆ ಇನ್ನೂ ಯಾವುದೇ ಅಧಿಕೃತ ನಿರ್ಧಾರ ತೆಗೆದುಕೊಳ್ಳದಿದ್ದರೂ, ಬಿಜೆಪಿ ಅವರ ಮುಂದಿನ ಆಯ್ಕೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ಈ ನಡುವೆ ಪತ್ರಕರ್ತರೊಬ್ಬರು ಬಿಜೆಪಿಗೆ ಸೇರುತ್ತೀರಾ? ಎಂದು ಪ್ರಶ್ನಿಸಿದ ವೇಳೆ “ಯಾಕಾಗಬಾರದು?” ಎಂದು ಉತ್ತರ ನೀಡಿದ್ದಾರೆ. ಅಲ್ಲದೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಏಳನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳುವ ಮೂಲಕ ಬಿಜೆಪಿ ಸೇರುವ ಸೂಚನೆ ನೀಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ನಾನು ಪ್ರಮುಖ ಪಾತ್ರ ವಹಿಸುತ್ತೇನೆ” ಎಂದು ಹೇಳಿರುವ ಹಾರ್ದಿಕ್ ಪಟೇಲ್ ಮುಂದಿನ ನಡೆ ಏನೆಂದು ಹೇಳುವುದಾಗಿ ತಿಳಿಸಿದ್ದಾರೆ. ಪಾಟಿದಾರ್ ಸಮುದಾಯದ ನಾಯಕನಾಗಿರುವ ಹಾರ್ದಿಕ್ ಪಟೇಲ್ ಇದುವರೆಗೂ ಮುಂದಿನ ರಾಜಕೀಯ ನಡೆ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. “ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ, ಸ್ನೇಹಿತರು, ಹಿತೈಷಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಜನರಿಗೆ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇನೆ. ನನ್ನ ಉದ್ದೇಶ ಜನಗಳ ಜೊತೆ ಇರುವುದು ಜನರಿಗೆ ಅನುಕೂಲವಾಗುವಂತೆ ಆಯ್ಕೆಗಳನ್ನು ಮಾಡುವುದು” ಎಂದು ಹೇಳಿದ್ದಾರೆ.

ಉತ್ತಾರಖಂಡ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ನಿರಾಶಾದಾಯಕ ಫಲಿತಾಂಶ ಬಂದರೂ, 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. “ಎಎಪಿ ಚುನಾವಣಾ ತಂತ್ರವು ಖಂಡಿತವಾಗಿಯೂ ಕಾಂಗ್ರೆಸ್‌ಗಿಂತ ಉತ್ತಮವಾಗಿದೆ. ಕಾಂಗ್ರೆಸ್‌ಗೆ ಈ ವಿಚಾರವನ್ನು ಅರ್ಥ ಮಾಡಿಸಲು ನನಗೆ ಆಗಲಿಲ್ಲ” ಎಂದು ಕಾಂಗ್ರೆಸ್ ವಿರುದ್ಧ ಅಸಹನೆಯನ್ನು ಪಟೇಲ್ ವ್ಯಕ್ತಪಡಿಸಿದ್ದಾರೆ. “ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿರುವುದು, ಗುಜರಾತ್ ರಾಜ್ಯದ ಜನರೊಂದಿಗೆ ಕಾಂಗ್ರೆಸ್ ಸಂಪರ್ಕ ಸಾಧಿಸುವ ಚುನಾವಣಾ ತಂತ್ರದಲ್ಲಿ ತಪ್ಪು ಲೆಕ್ಕಾಚಾರಗಳಿಂದ ಗುಜರಾತ್‌ನಲ್ಲಿ ಕಾಂಗ್ರೆಸ್ ಸೋತಿತು” ಎಂದು ಹೇಳಿದ್ದಾರೆ

- Advertisement -
spot_img

Latest News

error: Content is protected !!