Wednesday, May 8, 2024
Homeಕರಾವಳಿಮಾಣಿ: ಮಹಿಳೆಯರಿಗೆ ದೌರ್ಜನ್ಯದಿಂದ ಮುಕ್ತಿ ತರಬೇತಿ ಕಾರ್ಯಕ್ರಮ!

ಮಾಣಿ: ಮಹಿಳೆಯರಿಗೆ ದೌರ್ಜನ್ಯದಿಂದ ಮುಕ್ತಿ ತರಬೇತಿ ಕಾರ್ಯಕ್ರಮ!

spot_img
- Advertisement -
- Advertisement -

ಮಾಣಿ: ತಾಯಿ ಇಲ್ಲದ ಜನ್ಮವಿಲ್ಲ, ಮಹಿಳೆ ಇಲ್ಲದ ಮನೆಯಿಲ್ಲ, ಸ್ತ್ರೀ ಇಲ್ಲದ ಜಗವನ್ನು ಊಹಿಸಲು ಸಾಧ್ಯವಿಲ್ಲ, ಅವಳ ಪಾತ್ರವನ್ನು ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ, ಕೊಡಾಜೆ ಹೇಳಿದರು.

ಮಾಣಿ ಗ್ರಾಮ ಪಂಚಾಯತ್ ಮತ್ತು ಮಾಣಿಕ್ಯ ಸಂಜೀವಿನಿ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಪಂಚಾಯತ್ ಸಭಾಂಗಣದಲ್ಲಿ ಜರಗಿದ ಮಹಿಳೆಯರಿಗೆ ದೌರ್ಜನ್ಯದಿಂದ ಮುಕ್ತಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೌರ್ಜನ್ಯಮುಕ್ತ ಸಮಾಜದ ಗುರಿಯೊಂದಿಗೆ ನಮ್ಮ ಕರ್ತವ್ಯವನ್ನು ನಿರ್ವಹಿಸಿದಾಗ, ಗ್ರಾಮದಲ್ಲಿ ಸುಭಿಕ್ಷೆಯನ್ನು ಕಾಣಲು ಸಾಧ್ಯ. ಮಹಿಳೆಯರನ್ನು ಗೌರವದ ಭಾವನೆಯಿಂದ ಕಾಣುವುದು ಎಲ್ಲರ ಧರ್ಮ ಎಂದು ಅಭಿಪ್ರಾಯಪಟ್ಟರು.



ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರೋಹಿಣಿ ಮಾತನಾಡಿ, ಸಾಮಾಜಿಕವಾಗಿ ಮತ್ತು ಕೌಟುಂಬಿಕವಾಗಿ ಮಹಿಳೆಯರ ಜವಾಬ್ದಾರಿ ಹಾಗೂ ಪರಸ್ಪರ ಪ್ರೀತಿಯಿಂದ ಸಮಸ್ಯೆಗಳನ್ನು ಯಾವ ರೀತಿ ಪರಿಹರಿಸಿಕೊಳ್ಳಬಹುವುದು ಎನ್ನುವ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾರವರು, ಮಹಿಳಾ ಗ್ರಾಮ ಸಭೆಯ ಅಗತ್ಯ ಮತ್ತು ಪಂಚಾಯತ್ತಿನಿಂದ ಸಿಗುವ ಸೌಲಭ್ಯಗಳನ್ನು ಮಹಿಳೆಯರು ಯಾವ ರೀತಿ ಪಡೆದುಕೊಳ್ಳಬೇಕು ಎನ್ನುವ ಬಗ್ಗೆ ತಿಳಿಸಿದರು.

ಉನ್ನತಿ ಸಂಸ್ಥೆಯ ತಾಲೂಕು ಸಂಯೋಜಕಿ ದೀಕ್ಷಾರವರು ಮಹಿಳಾ ಸಬಲೀಕರಣ, ಸ್ವ-ಉದ್ಯೋಗ ಮತ್ತು ಉದ್ಯಮಶೀಲತೆಯ ತರಬೇತಿಯನ್ನು ಗ್ರಾಮ ಮಟ್ಟದಲ್ಲಿ ನಡೆಸುವ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರುಗಳಾದ ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ನಾರಾಯಣ ಶೆಟ್ಟಿ, ರಮಣಿ.ಡಿ.ಪೂಜಾರಿ, ಸೀತಾ, ಸುಜಾತಾ, ಮಿತ್ರಾಕ್ಷಿ ಮತ್ತು ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು. ಸಂಜೀವಿನಿ ಒಕ್ಕೂಟದ ಸಂಯೋಜಕಿ ಲೈಲಾಬಿ ಸ್ವಾಗತಿಸಿದರು. ಸಹಸಂಯೋಜಕಿ ರವಿಕಲಾ ವಂದಿಸಿದರು.

- Advertisement -
spot_img

Latest News

error: Content is protected !!