- Advertisement -
![]()
- Advertisement -
ಮಂಗಳೂರು; ಅಣ್ಣನ ಉತ್ತರಕ್ರಿಯೆಗೆ ರೆಡಿ ಮಾಡುತ್ತಿದ್ದಾಗ ಕರೆಂಟ್ ಶಾಕ್ ತಗುಲಿ ತಂಗಿ ಸಾವನ್ನಪ್ಪಿರುವ ಘಟನೆ ನಿಟ್ಟೆ ಪರಪ್ಪಾಡಿ ಎಂಬಲ್ಲಿ ನಡೆದಿದೆ. ಲಲಿತಾ ಬೋಂಡ್ರ ಮೃತ ದುರ್ದೈವಿ.
ನಿಟ್ಟೆ ಪರಪ್ಪಾಡಿಯ ರಾಘು ಬೋಂಡ್ರ ಎಂಬವರು ಕೆಲ ದಿನಳ ಹಿಂದೆ ಮೃತಪಟ್ಟಿದ್ದರು. ಅಣ್ಣನ ತಿಥಿಯ ಪೂರ್ವ ಸಿದ್ಧತೆಗಾಗಿ ಬಂದಿದ್ದ ತಂಗಿ ಲಲಿತಾ ಬೋಂಡ್ರ ಅವರು ಗುರುವಾರ ರಾತ್ರಿ ಅಡುಗೆ ಪಾತ್ರೆಗಳನ್ನು ತೊಳೆಯುತ್ತಿದ್ದರು. ಅದೇ ಸಂದರ್ಭದಲ್ಲಿ ಮನೆ ಹೊರಾಂಗಣದಲ್ಲಿ ಅಳವಡಿಸಲಾಗಿದ್ದ ಶಾಮಿಯಾನದ ಕಬ್ಬಿಣದ ಕಂಬವನ್ನು ಹಿಡಿಯುತ್ತಿದ್ದಂತೆ ಅವರು ವಿದ್ಯುತ್ ತಗುಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಶಾಮಿಯಾನ ಅಳವಡಿಸಿದಾಗ ಅದರ ಕಬ್ಬಿಣದ ಕಂಬಕ್ಕೆ ಟ್ಯೂಬ್ ಲೈಟ್ ಅಳವಡಿಸಲಾಗಿತ್ತು, ಅದರಿಂದ ವಿದ್ಯುತ್ ಪ್ರವಹಿಸಿ ಘಟನೆ ಸಂಭವಿಸಿದೆ ಎನ್ನಲಾಗಿದೆ.
- Advertisement -


