Wednesday, May 15, 2024
Homeಕರಾವಳಿಮಂಗಳೂರು: ಮನೆಯೊಂದರ ಡ್ರೈನೇಜ್ ಪಿಟ್ ನಲ್ಲಿ ಮಹಿಳೆಯ ಮೃತದೇಹ ಪತ್ತೆ

ಮಂಗಳೂರು: ಮನೆಯೊಂದರ ಡ್ರೈನೇಜ್ ಪಿಟ್ ನಲ್ಲಿ ಮಹಿಳೆಯ ಮೃತದೇಹ ಪತ್ತೆ

spot_img
- Advertisement -
- Advertisement -

ಮಂಗಳೂರು: ಮನೆಯೊಂದರ ಡ್ರೈನೇಜ್ ಪಿಟ್ ನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ಮುಲ್ಕಿಯಲ್ಲಿ ನಡೆದಿದೆ. ಕಲ್ಲಾಪು ನಿವಾಸಿ ನಾಗಮ್ಮ ಶೆಟ್ಟಿಗಾರ್ ಮೃತ ಮಹಿಳೆ.
ಪಡುಪಣಂಬೂರು ಪಂಚಾಯತ್ ವ್ಯಾಪ್ತಿಯ ಪುಷ್ಪರಾಜ್ ಅಮೀನ್ ಎಂಬವರ ಮನೆಯ ಹಿಂದುಗಡೆ ಇರುವ ಡ್ರೈನೇಜ್ ಪಿಟ್ ನಲ್ಲಿ ನಾಗಮ್ಮ ಶೆಟ್ಟಿಗಾರ್ ಶವ ಪತ್ತೆಯಾಗಿದೆ. ಇನ್ನು ಮಹಿಳೆ ನಾಗಮ್ಮ ಕಳೆದ 4 ತಿಂಗಳ ಹಿಂದೆ ಕಲ್ಲಾಪಿನಿಂದ ನಾಪತ್ತೆಯಾಗಿದ್ದಾರೆ  ಎನ್ನಲಾಗಿದೆ.

ಮನೆ ಮಾಲೀಕ ಪುಷ್ಪರಾಜ್ ಅಮೀನ್ ಅವರು ಮುಂಬೈನಲ್ಲಿ ವಾಸವಾಗಿದ್ದು, ಯಾವಾಗಲಾದರೂ ಒಮ್ಮೆ ಊರಿಗೆ ಬರುತ್ತಿದ್ದರು. ಇದೀಗ ಊರಿಗೆ ಬಂದಿದ್ದು, ಮನೆ ಹಿಂಬದಿಯ ಪಿಟ್ ನಲ್ಲಿ ಶವ ಇರುವುದನ್ನು ಗಮನಿಸಿ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!