Friday, May 17, 2024
Homeಕರಾವಳಿಕರಾವಳಿಯ 5 ಶಾಸಕರು ಸೇರಿದಂತೆ ವಿಧಾನಸಭೆಯಿಂದ 10 ಬಿಜೆಪಿ ಶಾಸಕರು ಅಮಾನತು

ಕರಾವಳಿಯ 5 ಶಾಸಕರು ಸೇರಿದಂತೆ ವಿಧಾನಸಭೆಯಿಂದ 10 ಬಿಜೆಪಿ ಶಾಸಕರು ಅಮಾನತು

spot_img
- Advertisement -
- Advertisement -

ಬೆಂಗಳೂರು: ವಿಧಾನಸಭೆಯಲ್ಲಿ ಅಸಭ್ಯ ವರ್ತನೆ ತೋರಿದ ಆರೋಪದ ಹಿನ್ನೆಲೆಯಲ್ಲಿ ಕರಾವಳಿಯ ಐವರು ಶಾಸಕರು ಸೇರಿದಂತೆ ಒಟ್ಟು ಹತ್ತು ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ.

ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್.‌ ಅಶ್ವಥ್ ನಾರಾಯಣ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಉಡುಪಿ ಶಾಸಕ ಯಶಪಾಲ್ ಸುವರ್ಣ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ, ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ಪದ್ಮನಾಭನಗರ ಶಾಸಕ ಆರ್. ಅಶೋಕ್, ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಮತ್ತು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರನ್ನು ಅಮಾನತು ಮಾಡಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ರೂಲಿಂಗ್ ನೀಡಿದ್ದಾರೆ.

ಮಹಾಘಟಬಂಧನ್ ಸಭೆಗೆ ಬಂದಿದ್ದ ಗಣ್ಯರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದನ್ನು ವಿರೋಧಿಸಿ ಸದನದಲ್ಲಿ ಧರಣಿ ನಡೆಸಿದ್ದ ಬಿಜೆಪಿ ಸದಸ್ಯರು ಸಿಟ್ಟಿಗೆದ್ದು ಸ್ಪೀಕರ್ ಪೀಠದ ಮೇಲೆಯೇ ವಿಧೇಯಕಗಳ ಪ್ರತಿಗಳನ್ನು ಹರಿದು ಎಸೆದಿದ್ದರು‌.ಪ್ರಸಕ್ತ ಅಧಿವೇಶನ ಮುಗಿಯುವವರೆಗೂ ಹತ್ತು ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ.

- Advertisement -
spot_img

Latest News

error: Content is protected !!