Wednesday, June 3, 2026
Homeಇತರಮಹಿಳೆಯೊಬ್ಬಳು ತನ್ನ ಮಗಳೊಂದಿಗೆ ನಾಪತ್ತೆ- ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು...!

ಮಹಿಳೆಯೊಬ್ಬಳು ತನ್ನ ಮಗಳೊಂದಿಗೆ ನಾಪತ್ತೆ- ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…!

- Advertisement -
- Advertisement -

ವೇಣೂರು: ಮಹಿಳೆಯೊಬ್ಬಳು ತನ್ನ ಮಗಳೊಂದಿಗೆ ನಾಪತ್ತೆಯಾದ ಘಟನೆ ಪರಾಡಿ ಗ್ರಾಮದಲ್ಲಿ ನಡೆದಿದೆ. ನಾಪತ್ತೆಯಾದ ಮಹಿಳೆಯನ್ನು ಆಯಿಷಾ ಮಂಜಿಲ್ ನಿವಾಸಿಯ ಜುಬೈದಾ ಶೇಖ್ ಎಂದು ಗುರುತಿಸಲಾಗಿದೆ.

ವಿದೇಶದಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ತಾಜುದ್ದೀನ್ ಶೇಖ್ ರವರ ಪತ್ನಿ ಜುಬೈದಾ ಶೇಖ್ ತನ್ನ ಮೂವರು ಮಕ್ಕಳೊಂದಿಗೆ ಪರಾಡಿಯಲ್ಲಿ ವಾಸವಾಗಿದ್ದು, ಡಿ. 18ರಂದು ರಾತ್ರಿ ಊಟ ಮಾಡಿ ಮೂವರು ಮಕ್ಕಳೊಂದಿಗೆ ಮಲಗಿದ್ದರು. ಆದರೆ ಮರುದಿನ ಬೆಳಗ್ಗೆ ಮನೆಯವರು ಎದ್ದು ನೋಡಿದ ಸಂದರ್ಭದಲ್ಲಿ ಮಗಳು ಮತ್ತು ತಾಯಿ ನಾಪತ್ತೆಯಾಗಿದ್ದರು ಎಂದು ಮನೆಯವರು ತಿಳಿಸಿದ್ದಾರೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಾಪತ್ತೆಯಾದ ಮಹಿಳೆ ಹಾಗು ಮಗಳ ಪತ್ತೆ ಕಾರ್ಯ ನಡೆಯುತ್ತಿದೆ.

- Advertisement -

Latest News

error: Content is protected !!