Thursday, June 4, 2026
Homeಕರಾವಳಿಮಂಗಳೂರು: ಫ್ಲ್ಯಾಟ್‌ ನಲ್ಲಿ ಗಾಜಿನ ಬಾಗಿಲು ಲಾಕ್ ಆಗಿ ಒಳಗೆ ಸಿಲುಕಿದ್ದ ಮಗುವನ್ನು ರಕ್ಷಿಸಿದ ಕದ್ರಿ...

ಮಂಗಳೂರು: ಫ್ಲ್ಯಾಟ್‌ ನಲ್ಲಿ ಗಾಜಿನ ಬಾಗಿಲು ಲಾಕ್ ಆಗಿ ಒಳಗೆ ಸಿಲುಕಿದ್ದ ಮಗುವನ್ನು ರಕ್ಷಿಸಿದ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ…!

- Advertisement -
- Advertisement -

ಮಂಗಳೂರು: ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ನಲ್ಲಿ ಗಾಜಿನ ಬಾಗಿಲು ಲಾಕ್ ಆಗಿ ಒಳಗೆ ಸಿಲುಕಿದ್ದ ಮಗುವನ್ನು ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಿನ್ನೆ ನಡೆದಿದೆ.

ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ದಂಪತಿ ಒಂದು ವರ್ಷ ಪ್ರಾಯದ ಮಗುವನ್ನು ಅಜ್ಜಿಯ ಜತೆಗೆ ಬಿಟ್ಟು ಬೆಳಗ್ಗೆ7.30 ರ ವೇಳೆಗೆ ಹೊರಗಡೆ ಹೋಗಿದ್ದರು. ಅಜ್ಜಿ ಫ್ಲ್ಯಾಟ್‌ ನ ಹೊರಭಾಗಕ್ಕೆ ಬಂದು ಸ್ವಚ್ಛತೆಯ ಕೆಲಸ ಮಾಡುತ್ತಿದ್ದರು. ಈ ವೇಳೆ ಮಗು ಹೊರಗೆ ಬಾರದಿರಲಿ ಎಂದು ಫ್ಲ್ಯಾಟ್‌ ನೊಳಗಿನ ಗಾಜಿನ ಬಾಗಿಲನ್ನು ಸರಿಸಿದ್ದರು. ಆದರೆ ಆ ಬಾಗಿಲು ಆಕಸ್ಮಿಕವಾಗಿ ಲಾಕ್ ಆಯಿತು.

ಗಾಬರಿಗೊಂಡ ಅವರು ತಕ್ಷಣ ಫ್ಲ್ಯಾಟ್‌ ನ ಇತರರಿಗೆ ಮಾಹಿತಿ ನೀಡಿದರು. ಅವರು ಅಗ್ನಿಶಾಮಕ ದಳಕ್ಕೆ ಸುದ್ದಿ ರವಾನಿಸಿದರು. ಅದರಂತೆ ಅಗ್ನಿಶಾಮಕ ದಳದ 4 ಮಂದಿ ಸಿಬ್ಬಂದಿ ಅಪಾರ್ಟ್‌ಮೆಂಟ್‌ನ 6ನೇ ಮಹಡಿಯಲ್ಲಿರುವ ಫ್ಲ್ಯಾಟ್‌ ಗೆ ತೆರಳಿ ಹಗ್ಗದ ಸಹಾಯದಿಂದ ಮಗುವನ್ನು ರಕ್ಷಿಸಿದ್ದಾರೆ.

- Advertisement -

Latest News

error: Content is protected !!