Saturday, June 6, 2026
Homeತಾಜಾ ಸುದ್ದಿಲಂಚ ಕೇಳಿದ ಮಹಿಳಾ ಪೊಲೀಸ್ ಅಧಿಕಾರಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ!..

ಲಂಚ ಕೇಳಿದ ಮಹಿಳಾ ಪೊಲೀಸ್ ಅಧಿಕಾರಿಗೆ 4 ವರ್ಷ ಕಠಿಣ ಜೈಲು ಶಿಕ್ಷೆ!..

- Advertisement -
- Advertisement -

ಕಲಬುರಗಿ: ಲಂಚ ಪ್ರತಿಬಂಧಕ ಕಾಯ್ದೆಗಳಡಿ ಲಂಚ ಪ್ರಕರಣದಲ್ಲಿ ಇಲ್ಲಿನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು 4 ವರ್ಷ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.ಅಲ್ಲದೆ ಈಕೆಗೆ 5 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪಿತ್ತಿದೆ.

ಅಪರಾಧಿಯನ್ನು ವಿಜಯಲಕ್ಷ್ಮಿ ಮಸಾರೆ ಎಂದು ಗುರುತಿಸಲಾಗಿದೆ. ಈಕೆ ಶಹಾಬಾದ್ ಠಾಣೆ ಇನ್ಸ್ ಪೆಕ್ಟರ್ ಆಗಿದ್ದಾಗ 2015ರಲ್ಲಿ ಪ್ರಕರಣವೊಂದರಲ್ಲಿ ಜಪ್ತಿ ಮಾಡಿದ ವಾಹನ ಬಿಡುಗಡೆಗೆ 25 ಸಾವಿರ ರೂ.‌ ಹಣದ ಬೇಡಿಕೆ ಇಟ್ಟಿದ್ದರು. ಈ ವೇಳೆ ವಾಹನ ಮಾಲೀಕ ನೀಡಿದ ದೂರಿನ ಮೇರೆಗೆ ಕಲಬುರಗಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಪ್ರಕರಣ ದಾಖಲಿಸಿದ್ದರು.ಈಗ ವಿಚಾರಣೆ ನಡೆದು ತೀರ್ಪು ಹೊರಬಿದ್ದಿದೆ.ಸದ್ಯ ವಿಜಯಲಕ್ಷ್ಮಿ ನಾಗರಿಕ ಹಕ್ಕು ಜಾರಿ (ಸಿಆರ್‌ಇ) ಘಟಕದಲ್ಲಿ ಡಿವೈಎಸ್ ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

- Advertisement -

Latest News

error: Content is protected !!