Wednesday, June 24, 2026
Homeತಾಜಾ ಸುದ್ದಿಇನ್‌ಸ್ಟ್ರಾಗ್ರಾಮ್ ಪ್ರೀತಿಗೆ ಮರುಳಾಗಿ ಮೋಸ ಹೋದ ಮಹಿಳೆ; ಪತಿ ಬಿಟ್ಟು ಬಂದಿದ್ದ ಗೃಹಿಣಿ ಬಾಡಿಗೆ ಮನೆಯಲ್ಲಿ...

ಇನ್‌ಸ್ಟ್ರಾಗ್ರಾಮ್ ಪ್ರೀತಿಗೆ ಮರುಳಾಗಿ ಮೋಸ ಹೋದ ಮಹಿಳೆ; ಪತಿ ಬಿಟ್ಟು ಬಂದಿದ್ದ ಗೃಹಿಣಿ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣು

- Advertisement -
- Advertisement -

ಧಾರವಾಡ: ಇಲ್ಲಿನ ಗೃಹಿನಿಯೊಬ್ಬಳು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನೊಂದಿಗೆ ಪ್ರೀತಿಗೆ ಬಿದ್ದು, ತನ್ನ ಪತಿಯನ್ನ ಬಿಟ್ಟು ಬಂದು ಒಂದು ವರ್ಷದ ಬಳಿಕ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಶ್ರೀನಗರ 1ನೇ ಕ್ರಾಸ್‌ನ ಮನೆಯಲ್ಲಿ ನಡೆದಿದೆ.

ನೇಣಿಗೆ ಶರಣಾದ ಗೃಹಿಣಿ ಶ್ವೇತಾ ಗುದಗಾಪುರ (24 ಎನ್ನಲಾಗಿದೆ.  

ಶ್ವೇತಾ ಅವರಿಗೆ ರಾಮದುರ್ಗ ಮೂಲದ ವಿಶ್ವನಾಥ ಎಂಬವರ ಜೊತೆಗೆ ಐದು ವರ್ಷದ ಹಿಂದೆ ವಿವಾಹವಾಗಿದ್ದು, ಇವರು ಪತಿಯನ್ನು ಬಿಟ್ಟು ಇನ್‌ಸ್ಟ್ರಾಗ್ರಾಮ್ ಪ್ರೀತಿಗೆ ಮರುಳಾಗಿ ಧಾರವಾಡಕ್ಕೆ ಬಂದು ಕಳೆದ ಒಂದು ವರ್ಷದಿಂದ ವಾಸವಾಗಿದ್ದರು.

ಇನ್‌ಸ್ಟ್ರಾಗ್ರಾಮ್ ನಲ್ಲಿ ಧಾರವಾಡ ಮೂಲದ ಯುವಕನೊಂದಿಗೆ ಪ್ರೀತಿಗೆ ಬಿದ್ದಿದ್ದು, ಬಳಿಕ ಪತಿಗೆ ಡೈವರ್ಸ್ ನೋಟಿಸ್ ಕಳುಹಿಸಿದ್ದರು. ಕಳೆದ ಎರಡು ವರ್ಷದಿಂದ ಪತಿಯಿಂದ ದೂರವಾಗಿದ್ದರು.

ಯುವಕನ ನಂಬಿ ಪತಿ ಬಿಟ್ಟು ಶ್ವೇತಾ ಬಂದಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಓದಿಕೊಳ್ಳೋದಾಗಿ ಬಾಡಿಗೆ ಮನೆಯಲ್ಲಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!