Friday, June 26, 2026
Homeಕರಾವಳಿಮಂಗಳೂರುಸುಳ್ಯ;  ಸ್ನಾನಕ್ಕೆ ನೀರು ಕಾಯಿಸಲು ಒಲೆಗೆ ಬೆಂಕಿ ಹಾಕುತ್ತಿದ್ದಾಗ ಹಾವು ಕಚ್ಚಿ ಮಹಿಳೆ ಸಾವು

ಸುಳ್ಯ;  ಸ್ನಾನಕ್ಕೆ ನೀರು ಕಾಯಿಸಲು ಒಲೆಗೆ ಬೆಂಕಿ ಹಾಕುತ್ತಿದ್ದಾಗ ಹಾವು ಕಚ್ಚಿ ಮಹಿಳೆ ಸಾವು

- Advertisement -
- Advertisement -

ಸುಳ್ಯ;  ಸ್ನಾನಕ್ಕೆ ನೀರು ಕಾಯಿಸಲು ಒಲೆಗೆ ಬೆಂಕಿ ಹಾಕುತ್ತಿದ್ದಾಗ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಆಲೆಟ್ಟಿ ಗ್ರಾಮದ ಕುಡೆಂಬಿ ಎಂಬಲ್ಲಿ ನಡೆದಿದೆ. ಕುಡೆಂಬಿ ಕುತ್ತಿಮುಂಡ ಶಾಂತಪ್ಪ ಎಂಬವರ ಪತ್ನಿ ರಾಧಮ್ಮ ಮೃತ ಮಹಿಳೆ.

ರಾಧಮ್ಮ ಅವರು ನೀರು ಕಾಯಿಸಲು ತೆಂಗಿನ ಕಾಯಿ ಸಿಪ್ಪೆ ರಾಶಿ ಕಾ ಹಾಕಿದಾಗ ಅದರಲ್ಲಿದ್ದ ಹಾವು ಕಚ್ಚಿದೆ ಎನ್ನಲಾಗಿದೆ. ಹಾವು ಕಡಿದಾಗ ಅವರ  ಮನೆಯಲ್ಲಿ ಅವರ ಅತ್ತೆ ಮಾತ್ರ ಇದ್ದರು. ಬಳಿಕ ಸ್ಥಳೀಯರಿಗೆ ವಿಷಯ ತಿಳಿಸಿ, ಅವರೆಲ್ಲರೂ ಬಂದು ರಾಧಮ್ಮರನ್ನು ಸುಳ್ಯಕೆ.ವಿ.ಜಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!