Thursday, June 4, 2026
Homeಅಪರಾಧಮಾನಸಿಕ ಅಸ್ವಸ್ಥನಿಂದ ಮಹಿಳೆಯ ಮೇಲೆ ಹಲ್ಲೆ

ಮಾನಸಿಕ ಅಸ್ವಸ್ಥನಿಂದ ಮಹಿಳೆಯ ಮೇಲೆ ಹಲ್ಲೆ

- Advertisement -
- Advertisement -

ಮೂಡುಬಿದಿರೆ: ಪಾಲಡ್ಕ ಗ್ರಾಮದ ವರ್ಣಬೆಟ್ಟಿನಲ್ಲಿ ದನ ಮೇಯಿಸುತ್ತಿದ್ದ ಮಹಿಳೆಯೋರ್ವರಿಗೆ ಮಾನಸಿಕವಾಗಿ ಅಸ್ವಸ್ಥನೆನ್ನಲಾದ ವ್ಯಕ್ತಿ ಕತ್ತಿಯಿಂದ ಇರಿದ ಘಟನೆ ನಡೆದಿದ್ದು, ಮಹಿಳೆ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿಯಿಂದ ಹಲ್ಲೆಗೊಳಗಾದ ಮಹಿಳೆಯನ್ನ ಕೆರೆಕೋಡಿ ನಿವಾಸಿ ನವೀನ್ ಅವರ ಪತ್ನಿ ಸಂಜೀವಿ (ನಯನಾ ನಾಯ್ಕ್) ಎನ್ನಲಾಗಿದೆ.

ರಾಮಮೋಹನ ನಗರದ ನಿವಾಸಿ ರಾಜೇಶ್ ನಾಯ್ಕ್ ಇರಿದ ಆರೋಪಿಯಾಗಿದ್ದಾನೆ. ಆತನನ್ನು ಮೂಡುಬಿದಿರೆ ನಿರೀಕ್ಷಕ ಸಂದೇಶ್ ಪಿ.ಜಿ. ವಶಕ್ಕೆ ತೆಗೆದುಕೊಂಡಿದ್ದು ಸದ್ಯ ಮಂಗಳೂರಿನ ಮಾನಸಿಕ ಚಿಕಿತ್ಸಾಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!