Wednesday, June 24, 2026
Homeಕರಾವಳಿಮಂಗಳೂರುಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿದ್ದ ಕೈದಿಗೆ ಮಾದಕವಸ್ತು ಪೂರೈಸುತ್ತಿದ್ದ ಮಹಿಳೆ ಅರೆಸ್ಟ್

ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿದ್ದ ಕೈದಿಗೆ ಮಾದಕವಸ್ತು ಪೂರೈಸುತ್ತಿದ್ದ ಮಹಿಳೆ ಅರೆಸ್ಟ್

- Advertisement -
- Advertisement -

ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿದ್ದ ಕೈದಿಗೆ ಮಾದಕವಸ್ತು ಪೂರೈಸುತ್ತಿದ್ದ ಮಹಿಳೆಯನ್ನು ಅರೆಸ್ಟ್ ಮಾಡಲಾಗಿದೆ. ದ.ಕ. ಜಿಲ್ಲಾ ಕಾರಾಗೃಹದಲ್ಲಿ ಮುಹಮ್ಮದ್ ಅಸ್ಕರ್ ಎಂಬಾತ ವಿಚಾರಣಾಧೀನ ಕೈದಿಯಾಗಿದ್ದಾನೆ. ಈತನನ್ನು ಭೇಟಿ ಮಾಡಲು ಜುಲೈ 10 ರಂದು ಮಧ್ಯಾಹ್ನ 12:15ಕ್ಕೆ ಸಂದರ್ಶಕಿಯಾಗಿ ರಮ್‌ನಾ ಎಂಬಾಕೆ ಬಂದಿದ್ದು, ಆಕೆ ಮುಹಮ್ಮದ್ ಅಸ್ಕರ್‌ಗೆ ನೀಡಲು ಬೇಕರಿ ತಿಂಡಿಗಳನ್ನು ತಂದಿದ್ದಳು. ಈ ವೇಳೆ  ಕರ್ತವ್ಯದಲ್ಲಿದ್ದ ಸಿಬ್ಬಂದಿ ಪರಿಶೀಲಿಸಿದಾಗ 5 ಸಣ್ಣ ಪೊಟ್ಟಣಗಳು ಕಂಡು ಬಂದಿದೆ. ಈ ಬಗ್ಗೆ ಸಿಬ್ಬಂದಿ ಆಕೆಯನ್ನು ವಿಚಾರಿಸಿದಾಗ ಹೊಸಂಗಡಿಯ ಹುಸೇನ್ ಎಂಬಾತ ಕೆಲವು ಪೊಟ್ಟಣಗಳನ್ನು ಕೊಡುತ್ತಾನೆ. ಅದನ್ನು ತಂದು ಕೊಡಬೇಕು ಎಂದು ಮುಹಮ್ಮದ್ ಅಸ್ಕರ್ ಈ ಹಿಂದೆ ತಿಳಿಸಿದ್ದ, ಅದರಂತೆ ತಾನು ತಂದಿರುವುದಾಗಿ ಹೇಳಿದ್ದಾಳೆ.

ಈ ಬಗ್ಗೆ ಜೈಲು ಅಧೀಕ್ಷಕ ಶರಣ ಬಸಪ್ಪ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!