Thursday, June 4, 2026
Homeಇತರಸೂಕ್ತ ಚಿಕಿತ್ಸೆ ಸಿಗದೇ ಮಗು ಸಾವು.. ಕರುಳು ಹಿಂಡುತ್ತಿದೆ ವೈರಲ್ ಆಗಿರುವ ಈ ವಿಡಿಯೋ

ಸೂಕ್ತ ಚಿಕಿತ್ಸೆ ಸಿಗದೇ ಮಗು ಸಾವು.. ಕರುಳು ಹಿಂಡುತ್ತಿದೆ ವೈರಲ್ ಆಗಿರುವ ಈ ವಿಡಿಯೋ

- Advertisement -
- Advertisement -

ಉತ್ತರ ಪ್ರದೇಶ  : ದೇಶದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗೋದೇ ಕಷ್ಟವಾಗಿದೆ.ಎಷ್ಟೋ ಆಸ್ಪತ್ರೆಗಳಲ್ಲಿ ಬೆಡ್ ಗಳು ಖಾಲಿ ಇಲ್ಲದೇ ರೋಗಿಗಳು ಹೊರಗೆ ಮಲಗುವಂತಾಗಿದೆ. ಅದೆಷ್ಟೋ ಮಂದಿ ಚಿಕಿತ್ಸೆ ಸಿಗದೇ ಸಾಯುತ್ತಿದ್ದಾರೆ.  ಇಂತಹದ್ದೇ ಕರುಳು ಹಿಂಡುವ ಘಟನೆಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ.

ಉತ್ತರಪ್ರದೇಶದ ಕನೌಜ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಪ್ರೇಮ್ ಚಂದ್ ಮತ್ತು ಆಶಾದೇವಿ ಎಂಬ ದಂಪತಿ ಮಗ ಅನುಜ್‌ನ್ನು ಭಾನುವಾರ ರಾತ್ರಿ ಕರೆದುಕೊಂಡು ಬಂದಿದ್ದರು. ಮಗುವಿಗೆ ಜ್ವರ ಬಾಧಿಸಿತ್ತು. ಒಂದು ವರ್ಷದ ಈ ಮಗು ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡಿ ಎಂದು ದಂಪತಿ ಆಸ್ಪತ್ರೆಯ ವೈದ್ಯರನ್ನು ಕೋರಿದ್ದರು. ಆದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಮಗು ಮೃತಪಟ್ಟಿತ್ತು.

 ಆಸ್ಪತ್ರೆಯ ಆವರಣದಲ್ಲಿ ಮಗುವಿನ ಮೃತದೇಹವನ್ನು ಅಪ್ಪಿಕೊಂಡು ಹೆತ್ತವರು ಅಳುತ್ತಿರುವ ವಿಡಿಯೊವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ.ಯಾವುದೇ ವೈದ್ಯರು ನನ್ನ ಮಗುವಿಗೆ ಚಿಕಿತ್ಸೆ ನೀಡಿಲ್ಲ ಎಂದು ಪಾಲಕರು ರೋಧಿಸುತ್ತಿದ್ದಾರೆ. ಇದನ್ನು ಅಲ್ಲಿಯೇ ಇರುವವರೊಬ್ಬರು ವಿಡಿಯೋ ಮಾಡಿಕೊಂಡಿದ್ದಾರೆ. ಅದೀಗ ವೈರಲ್‌ ಆಗಿದ್ದು, ಆಸ್ಪತ್ರೆಯ ಕ್ರಮಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ನಿಜಕ್ಕೂ ಈ ವಿಡಿಯೋ ಕೊರೊನಾವನ್ನು ನಿರ್ಲಕ್ಷ್ಯ ಮಾಡುವ ಎಲ್ಲರಿಗೂ ಒಂದು ಪಾಠ. ಇನ್ನಾದರೂ ಎಚ್ಚೆತ್ತಿಕೊಳ್ಳಿ..ದಯವಿಟ್ಟು ಮನೆಯಲ್ಲಿಯೇ ಇರಿ. ಸೇಫ್ ಆಗಿರಿ..

- Advertisement -

Latest News

error: Content is protected !!