Thursday, June 4, 2026
Homeತಾಜಾ ಸುದ್ದಿಕೊರೋನಾ ಸೋಂಕಿನ ಭೀತಿಯಲ್ಲಿ ಶಾಸಕ ಎಚ್‌.ಡಿ.ರೇವಣ್ಣ: ನಾಲ್ವರು ಸಿಬ್ಬಂದಿಗೆ ಸೋಂಕು ದೃಢ

ಕೊರೋನಾ ಸೋಂಕಿನ ಭೀತಿಯಲ್ಲಿ ಶಾಸಕ ಎಚ್‌.ಡಿ.ರೇವಣ್ಣ: ನಾಲ್ವರು ಸಿಬ್ಬಂದಿಗೆ ಸೋಂಕು ದೃಢ

- Advertisement -
- Advertisement -

ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ನಾಲ್ವರು ಭದ್ರತಾ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು ಆರು ಜನ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರಲ್ಲಿ ನಾಲ್ವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ನಿನ್ನೆ ತಪಾಸಣೆ ಮಾಡಲಾಗಿದ್ದು, ವರದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಇಬ್ಬರು ಪಿಎಗಳ ಕೊರೊನಾ ಟೆಸ್ಟ್ ನೆಗೆಟಿವ್ ಬಂದಿದೆ.

ಇಂದು ರೇವಣ್ಣ ಕೂಡ ತಪಾಸಣೆಗೆ ಒಳಗಾಗಲಿದ್ದು, ಭದ್ರತಾ ಸಿಬ್ಬಂದಿಗೆ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ರೇವಣ್ಣ ಅವರು ಕ್ವಾರಂಟೈನ್ ಆಗುವುದು ಅನಿವಾರ್ಯವಾಗಲಿದೆ.

ಎರಡು ದಿನಗಳ ಹಿಂದೆ ರೇವಣ್ಣ ಅವರ ಬೆಂಗಾವಲು ಪಡೆಯ ಒಟ್ಟು 9 ಪೊಲೀಸರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ನಾಲ್ವರಿಗೆ ಈಗ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಈವರೆಗೆ ರೇವಣ್ಣ ಅವರ ಇಬ್ಬರು ಆಪ್ತ ಸಹಾಯಕರು ಸೇರಿ ಒಟ್ಟು ಒಂಬತ್ತು ಜನರ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಲಾಗಿದೆ.

ಇನ್ನು ರೇವಣ್ಣ ಅವರು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರಿಗೂ ಭೀತಿ ಆವರಿಸಿದೆ.

- Advertisement -

Latest News

error: Content is protected !!