ಸುಳ್ಯ : ಕೊರೊನಾ ಹಿನ್ನಲೆಯಲ್ಲಿ ಒಂದೂವರೆ ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ವೈನ್ ಶಾಪ್ ಗಳು ಇದೀಗ ತೆರೆದಿದ್ದು , ಸುಳ್ಯದಲ್ಲಿ ಯುವಕನೊಬ್ಬ ಕಂಠ ಪೂರ್ತಿ ಮದ್ಯ ಸೇವಿಸಿ ಬೈಕ್ ಸಮೇತ ರಸ್ತೆ ಬದಿಗೆ ಬಿದ್ದ ದೃಶ್ಯ ಕಂಡು ಬಂದಿದೆ.
ವಿಪರೀತ ಮದ್ಯ ಸೇವಿಸಿ ಬೈಕ್ ಚಲಾಯಿಸಿದ ಈತ ಸುಳ್ಯ ಚೆನ್ನಕೇಶವ ದೇವಸ್ಥಾನದ ಒಳ ರಸ್ತೆಯಲ್ಲಿ ಬೈಕ್ ಚಲಾಯಿಸಿದ್ದಾನೆ. ನಿಯಂತ್ರಣ ತಪ್ಪಿ ಕಂಪೌಂಡೊಂದಕ್ಕೆ ಗುದ್ದಿ ಬೈಕ್ ಸಮೇತ ರಸ್ತೆ ಬದಿಗೆ ಬಿದ್ದಿದ್ದು, ಮುಖ, ಕೈಗಳಲ್ಲಿ ತರಚಿದ ಗಾಯಗಳಾಗಿವೆ. ಯುವಕ ರಸ್ತೆ ಬದಿ ಬಿದ್ದಿರುವುದನ್ನು ಆ ರಸ್ತೆಯಲ್ಲಿ ಬಂದ ಯುವಕರಿಬ್ಬರು ಬೈಕ್ ಅಪಘಾತ ವಾಗಿರಬಹುದೆಂದು ಭಾವಿಸಿ ಹೋಗಿ ಎತ್ತಲು ನೋಡಿದಾಗ ರಸ್ತೆ ಬದಿ ಬಿದ್ದಾತ ಎಬ್ಬಿಸಲು ಹೋದವರಿಗೆ ಬೈದನೆಂದು ಬಳಿಕ ಎಬ್ಬಿಸಲು ಹೋದವರು ಅಲ್ಲಿಂದ ಹೋದರೆನ್ನಲಾಗಿದೆ.
ಬಿದ್ದ ಯುವಕನ ಪಕ್ಕದಲ್ಲಿದ್ದ ಬ್ಯಾಗ್ ನಲ್ಲಿ ಮದ್ಯದ ಬಾಟಲಿ ಇತ್ತು. ವೈನ್ ಶಾಪ್ ನಿಂದ ಮದ್ಯ ಖರೀದೀಸಿ, ಬೇರೆಡೆ ಕುಡಿದು ಬೈಕ್ ಚಲಾಯಿಸಿಕೊಡು ಬರುವಾಗ ನಿಯಂತ್ರಣ ತಪ್ಪಿ ಈ ಘಟನೆ ನಡೆದಿರಬೇಕೆಂದು ಊಹಿಸಲಾಗಿದೆ. ಆ ಯುವಕನನ್ನು ಸ್ಥಳೀಯರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬೈಕ್ ಪೋಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.