- Advertisement -
- Advertisement -
ವೇಣೂರು: ಎಪ್ರಿಲ್ 30ರಂದು ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಕೋಡಿಯಲ್ಲಿ ಫಲ್ಗುಣಿ ಹೊಳೆಗೆ ವಿಷ ಬೆರೆಸಿ, ಮೀನುಗಳ ಮಾರಣ ಹೋಮ ನಡೆಸಿದ ಪ್ರಕರಣವನ್ನು ಭೇದಿಸಿದ ವೇಣೂರು ಪೊಲೀಸರು ಆರೋಪಿಗಳಾದ ಮೂಡುಕೋಡಿ ಗ್ರಾಮದ ಇರ್ಷಾದ್ ಹಾಗೂ ಮಹಮ್ಮದ್ ಹನೀಫನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೃತ್ತಿಯಲ್ಲಿ ಅಟೋ ಚಾಲಕರಾಗಿರುವ ಈ ಇಬ್ಬರು ದುಷ್ಕರ್ಮಿಗಳು ನದಿ ನೀರಿಗೆ ವಿಷ ಬೆರೆಸಿ, ಮೀನುಗಳ ಮಾರಣ ಹೋಮ ನಡೆಸುವ ದುಷ್ಕೃತ್ಯ ಯಾಕೆ ಎಸಗಿದರು ಎಂಬ ಸತ್ಯ ಹೊರಬರಬೇಕಾಗಿದೆ.
ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲು ಬೆಳ್ತಂಗಡಿಯ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಪಿ. ಜಿ.ಯವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಲೋಲಾಕ್ಷರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಪ್ರಕರಣ ಬೇಧಿಸಿದ ಪೊಲೀಸರ ತಂಡವನ್ನು ಮೂಡುಕೋಡಿ ಗ್ರಾಮಸ್ಥರು ಅಭಿನಂದಿಸಿದ್ದಾರೆ.
- Advertisement -