Saturday, June 6, 2026
Homeಕರಾವಳಿಸುರತ್ಕಲ್: ಎಂಆರ್‌ಪಿಎಲ್‌ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

ಸುರತ್ಕಲ್: ಎಂಆರ್‌ಪಿಎಲ್‌ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

- Advertisement -
- Advertisement -

ಮಂಗಳೂರು: ಇಲ್ಲಿನ ಎಂಆರ್ ಪಿಎಲ್ ಪರಿಸರದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

ಮೇ 1ರ ರಾತ್ರಿ ಎಂಆರ್‌ಪಿಎಲ್‌ ಪರಿಸರದಲ್ಲಿ ಚಿರತೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಮರುದಿನ ಬೆಳಗ್ಗೆ ಸಿಸಿ ಟಿವಿಯಲ್ಲಿ ಪರಿಶೀಲಿಸಿದಾಗ ಅರಿವಿಗೆ ಬಂದಿದೆ. ತತ್‌ಕ್ಷಣವೇ ಎಂಆರ್‌ಪಿಎಲ್‌ ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಮಂಗಳೂರಿನ ಅರಣ್ಯ ಇಲಾಖೆ ಸಿಬಂದಿ ಚಿರತೆ ಕಂಡುಬಂದ ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಚಲನವಲನಗಳ ಕುರುಹನ್ನು ಪರಿಶೀಲಿಸಿದ್ದರು. ಜೊತೆಗೆ ಚಿರತೆ ಹೋಗಿರಬಹುದಾದ ಸ್ಥಳಗಳಿಗೂ ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇಂದು ಈ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ ಅರಣ್ಯ ಇಲಾಖೆ ಹಾಗೂ ಪಿಲಿಕುಳ ವನ್ಯಜೀವಿ ಕೇಂದ್ರದ ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!