Thursday, June 4, 2026
Homeಕರಾವಳಿಪುತ್ತೂರಿನಲ್ಲಿ ಸ್ಕೂಟರ್ ಸವಾರನ ಮೇಲೆ ಕಾಡು ಹಂದಿ ದಾಳಿ; ಗಾಯಾಳು ಆಸ್ಪತ್ರೆಗೆ ದಾಖಲು

ಪುತ್ತೂರಿನಲ್ಲಿ ಸ್ಕೂಟರ್ ಸವಾರನ ಮೇಲೆ ಕಾಡು ಹಂದಿ ದಾಳಿ; ಗಾಯಾಳು ಆಸ್ಪತ್ರೆಗೆ ದಾಖಲು

- Advertisement -
- Advertisement -

ಪುತ್ತೂರು: ಕಾಡುಹಂದಿಯೊಂದು ಸ್ಕೂಟರ್ ಸವಾರನ ಮೇಲೆ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ದಾಳಿ ನಡೆಸಿದ ಘಟನೆ ಆ.20ರ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ಕಾಡುಹಂದಿಯಿಂದ ದಾಳಿಗೊಳಗಾದ ವ್ಯಕ್ತಿ ಕುಂಬ್ರ ಪೆಟ್ರೋಲ್ ಪಂಪ್ ನ ಮ್ಯಾನೇಜರ್, ಧನುಷ್ ಎಂದು ತಿಳಿದು ಬಂದಿದೆ.

ಧನುಷ್ ಎಂದಿನಂತೆ ಬೆಳಗ್ಗೆ ಸ್ಕೂಟರ್ ನಲ್ಲಿ ಕುಂಬ್ರ ಪೆಟ್ರೋಲ್ ಪಂಪ್ ಗೆ ಬರುತ್ತಿದ್ದ ವೇಳೆ ಏಕಾಏಕಿ ಕಾಡು ಹಂದಿಯೊಂದು ಅವರು ಚಲಾಯಿಸುತ್ತಿದ್ದ ಸ್ಕೂಟರ್ ಮೇಲೆ ದಾಳಿ ನಡೆಸಿದೆ. ದಾಳಿಯ ವೇಳೆಗೆ ನಿಯಂತ್ರಣ ತಪ್ಪಿ ಬಿದ್ದ ಧನುಷ್ ಅವರ ಮೇಲೆ ಕಾಡು ಹಂದಿ ಎರಗಿ ಅವರ ಬಲ ಕೈಗೆ ಕಚ್ಚಿ ಗಂಭೀರ ಗಾಯಗೊಳಿಸಿದ್ದು, ಇತರ ದೇಹದ ಭಾಗಗಳಿಗೂ ಕೂಡ ಗಾಯಗೊಳಿಸಿದೆ.

ಗಾಯಾಳು ಧನುಷ್ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ  ದಾಖಲಿಸಲಾಗಿದೆ.

- Advertisement -

Latest News

error: Content is protected !!