Monday, May 13, 2024
Homeಕರಾವಳಿಬೆಳ್ತಂಗಡಿ: ವ್ಯಕ್ತಿಯೊಬ್ಬರ ತೋಟದಲ್ಲಿ ಕಾಣಸಿಕ್ಕಿದ ಬೃಹದಾಕಾರದ ಕಾಡುಕೋಣ; ಎಚ್ಚರಿಕೆ ವಹಿಸಲು ಸೂಚನೆ

ಬೆಳ್ತಂಗಡಿ: ವ್ಯಕ್ತಿಯೊಬ್ಬರ ತೋಟದಲ್ಲಿ ಕಾಣಸಿಕ್ಕಿದ ಬೃಹದಾಕಾರದ ಕಾಡುಕೋಣ; ಎಚ್ಚರಿಕೆ ವಹಿಸಲು ಸೂಚನೆ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಗೇರುಕಟ್ಟೆಯ ಕಳಿಯ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ತುಕಾರಾಮ ಪೂಜಾರಿ ಯವರ ಮನೆಯ ಅಡಿಕೆ, ತೆಂಗಿನ ತೋಟದಲ್ಲಿ ನಿನ್ನೆ ಸಂಜೆ ಸಮಯದಲ್ಲಿ ಬೃಹದಾಕಾರದ ಒಂಟಿ ಕಾಡುಕೋಣ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.


ತೋಟದಲ್ಲಿರುವ ಹಲಸಿನ ಹಣ್ಣು ತಿನ್ನಲು ಬಂದಿದ್ದು, ಇದನ್ನು ಗಮನಿಸಿದ ತುಕಾರಾಮ ಪೂಜಾರಿ ಯವರು ತಮ್ಮಮೊಬೈಲ್ ಫೋನ್ ಮೂಲಕ ಸೆರೆ ಹಿಡಿದಿದ್ದಾರೆ.


ಕಳಿಯ ಬೀಡು, ಕಂಬದಡ್ಡ, ಬೆರ್ಕೆತ್ತೋಡಿ, ಅಂಗರ್ದೊಟ್ಟು, ಪದವು,ಹೀರ್ಯ, ಪರಪ್ಪು ಹಾಗೂ ಪೆಲತ್ತಳಿಕೆ ಪರಿಸರದಲ್ಲಿ ಓಡಾಡುತ್ತಿದ್ದು, ಸದ್ಯ ಕೃಷಿ ತರಕಾರಿಗಳಿಗೆ ಹೆಚ್ಚಿನ ತೊಂದರೆ ಕೊಡುವುದಿಲ್ಲ ಎಂದು ಕೃಷಿಕರು ಹೇಳಿ ಕೊಳ್ಳುತ್ತಾರೆ. ಕೃಷಿಕರಿಗೆ ನಷ್ಟ ಸಂಭವಿಸಿದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಪರಿಹಾರ ನೀಡುವ ಮೂಲಕ ಕಾಡು ಕೋಣಕ್ಕೆ ಸಾರ್ವಜನಿಕರು ತೊಂದರೆ ನೀಡಿದಂತೆ ಸಂಬಂಧ ಪಟ್ಟ ಇಲಾಖೆಯವರು ಎಚ್ಚರ ವಹಿಸಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ.

- Advertisement -
spot_img

Latest News

error: Content is protected !!