Wednesday, June 3, 2026
Homeತಾಜಾ ಸುದ್ದಿದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಕೊಡಿಸುವಂತೆ ಪತ್ನಿ ವಿಜಯಲಕ್ಷ್ಮೀ ಮನವಿ

ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಕೊಡಿಸುವಂತೆ ಪತ್ನಿ ವಿಜಯಲಕ್ಷ್ಮೀ ಮನವಿ

- Advertisement -
- Advertisement -

ಬಳ್ಳಾರಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮನವಿ ಮಾಡಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ ಬೆನ್ನಲ್ಲೇ ನಿನ್ನೆ ಪತಿ ನಟ ದರ್ಶನ್ ನೋಡಲು ವಿಜಯಲಕ್ಷ್ಮೀ ಆಗಮಿಸಿದ್ದರು.ಈ ವೇಳೆ ತಮ್ಮ ಪತಿ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆಯಿಂದ ಚಿಕಿತ್ಸೆ ನೀಡಲು ಡಿಐಜಿ ಟಿ. ಪಿ. ಶೇಷ ಅವರ ಬಳಿ ಮನವಿ ಮಾಡಿದ್ದರು ಎನ್ನಲಾಗಿದೆ.

ನಟ ದರ್ಶನ್ ಗೆ ಬೆನ್ನುನೋವಿನ ಕುರಿತು ಆಸ್ಪತ್ರೆ ದಾಖಲೆ ತರುವಂತೆ ಟಿಐಜಿ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಬೆನ್ನುನೋವು, ಮಲಬದ್ಧತೆ ಸಮಸ್ಯೆ ಅಷ್ಟೊಂದು ಗಂಭೀರ ಸಮಸ್ಯೆ ಅಲ್ಲ. ಅಗತ್ಯ ಬಿದ್ದರೆ ಜೈಲಿನ ವೈದ್ಯರೇ ಚಿಕಿತ್ಸೆ ಕೊಡುತ್ತಾರೆ ಎಂದು ಡಿಐಜಿ ಹೇಳಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!