Sunday, May 19, 2024
Homeತಾಜಾ ಸುದ್ದಿಪತಿಯ ಮೊಬೈಲ್ ಕದ್ದು ನೋಡಿದ ಪತ್ನಿಗೆ 1 ಲಕ್ಷ ದಂಡ ವಿಧಿಸಿದ ಕೋರ್ಟ್

ಪತಿಯ ಮೊಬೈಲ್ ಕದ್ದು ನೋಡಿದ ಪತ್ನಿಗೆ 1 ಲಕ್ಷ ದಂಡ ವಿಧಿಸಿದ ಕೋರ್ಟ್

spot_img
- Advertisement -
- Advertisement -

ದುಬೈ:  ಪತಿಯ  ಮೊಬೈಲ್  ಬಗ್ಗೆ ಗೂಢಚರ್ಯೆ ನಡೆಸಿದ ಪತ್ನಿಗೆ ಕೋರ್ಟ್ 1 ಲಕ್ಷ  ರೂಪಾಯಿ ದಂಡ ವಿಧಿಸಿದ ಘಟನೆ ದುಬೈ ನಲ್ಲಿ ನಡೆದಿದೆ.

ಪತ್ನಿಯೊಬ್ಬಳು ಪತಿಗೆ ಕಳಂಕ ತರುವ ನಿಟ್ಟಿನಲ್ಲಿ ಪತ್ನಿ ಆತನ ಮೊಬೈಲ್ ಫೋನ್ ನಿಂದ ಫೋಟೋ ಮತ್ತು ರೆಕಾರ್ಡಿಂಗ್ ಗಳನ್ನು ಆತನ ಕುಟುಂಬಕ್ಕೆ ಕಳುಹಿಸಿದ್ದಳು. ಇದರಿಂದ ಪತಿಯ ಖಾಸಗೀತನ ಮತ್ತು ಗೌಪ್ಯತೆಗೆ ಧಕ್ಕೆ ತಂದಿರುವುದಾಗಿ ಆರೋಪಿಸಿದ ದುಬೈನ ರಾಸ್ ಅಲ್ ಖೈಮಾದಲ್ಲಿರುವ ಸಿವಿಲ್ ಕೋರ್ಟ್ ಆಕೆಗೆ 5,400 ದಿರಾಮ್ (ಭಾರತದ ಒಂದು ಲಕ್ಷ ರೂಪಾಯಿ) ದಂಡ ಪಾವತಿಸುವಂತೆ ಆದೇಶ ನೀಡಿದೆ.

ತನ್ನ ಅನುಮತಿ ಇಲ್ಲದೇ ವರ್ಚಸ್ಸಿಗೆ ಧಕ್ಕೆ ತಂದಿರುವುದಾಗಿ ಆರೋಪಿಸಿ ಪತಿ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿ ಪತ್ನಿ ವಿರುದ್ಧ ಪರಿಹಾರಕ್ಕಾಗಿ ದಾವೆ ಹೂಡಿರುವುದಾಗಿ ವರದಿ ತಿಳಿಸಿದೆ. ಈ ಪ್ರಕರಣದಿಂದಾಗಿ ಕೆಲಸಕ್ಕೆ ಗೈರುಹಾಜರಾಗಿದ್ದಲ್ಲದೇ, ಸಂಬಳವೂ ಕೈಗೆ ಸಿಗದಂತಾಗಿದೆ. ಅಷ್ಟೇ ಅಲ್ಲ ಇದರಿಂದ ಮಾನಸಿಕವಾಗಿ ಕಿರುಕುಳ ಅನುಭವಿಸುವಂತಾಗಿದೆ ಎಂದು ಪತಿ ಕೋರ್ಟ್ ನಲ್ಲಿ ವಾದಿಸಿದ್ದರು.

ಪತ್ನಿಯ ವಕೀಲರ ಹಾಗೂ ಪತಿಯ ವಕೀಲರ ವಾದವನ್ನು ಆಲಿಸಿದ ಕೋರ್ಟ್, ಪ್ರಕರಣದಿಂದಾಗಿ ಸಂಬಳ ಕಳೆದುಕೊಳ್ಳುವಂತಾಗಿದೆ ಎಂಬ ವಾದವನ್ನು ತಿರಸ್ಕರಿಸಿದೆ. ಆದರೆ ಫೋನ್ ಗೂಢಚರ್ಯೆ ಮಾಡಿದ ಆರೋಪ ಸಾಬೀತಾಗಿದ್ದು, ಕಾನೂನು ಶುಲ್ಕ ಮತ್ತು ಖರ್ಚು ಸೇರಿ ಒಂದು ಲಕ್ಷ ರೂಪಾಯಿ ದಂಡವನ್ನು ಪಾವತಿಸುವಂತೆ ಪತ್ನಿಗೆ ಕೋರ್ಟ್ ಆದೇಶ ನೀಡಿದೆ.

- Advertisement -
spot_img

Latest News

error: Content is protected !!