Monday, June 8, 2026
Homeತಾಜಾ ಸುದ್ದಿಸುಬ್ರಹ್ಮಣ್ಯ: ವೀರ್ ಸಾರ್ವಕರ್ ಸ್ಮಾರಕ ನಿರ್ಮಿಸಲು ವಿರೋಧಿಸಿದ ಜನ ದೇಶವನ್ನೇ ವಿರೋಧಿಸಿದಂತೆ: ಆರಗ ಜ್ಞಾನೇಂದ್ರ

ಸುಬ್ರಹ್ಮಣ್ಯ: ವೀರ್ ಸಾರ್ವಕರ್ ಸ್ಮಾರಕ ನಿರ್ಮಿಸಲು ವಿರೋಧಿಸಿದ ಜನ ದೇಶವನ್ನೇ ವಿರೋಧಿಸಿದಂತೆ: ಆರಗ ಜ್ಞಾನೇಂದ್ರ

- Advertisement -
- Advertisement -

ಸುಬ್ರಹ್ಮಣ್ಯ: ವೀರ್ ಸಾರ್ವಕರ್ ಸ್ಮಾರಕ ನಿರ್ಮಿಸಲು ಜನ ವಿರೋಧಿಸಿದ್ದಾರೆ ಅಂತಾದ್ರೆ ಅವರು ದೇಶವನ್ನೆ ವಿರೋಧಿಸುತ್ತಾರೆ ಅಂದು ಅರ್ಥ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರರವರು ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಬೇಟಿ ನೀಡಿದ ವೇಳೆ ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ್ದಾರೆ.

ವೀರ್ ಸಾರ್ವಕರ್ ಬಿಜೆಪಿಯವರಲ್ಲ, ಬಿಜೆಪಿ, ಅರ್ ಎಸ್ ಎಸ್ ಹುಟ್ಟೋಕೆ ಮುಂಚೆಯೇ ಸಾರ್ವಕರ್ ದೇಶಕ್ಕಾಗಿ ಹೋರಾಡಿದ, ಕರಿ ನೀರಿನ ಶಿಕ್ಷೆ ಅನುಭವಿಸಿದ ಸ್ವಾತಂತ್ರ ಯೋಧ ಅಂತಹವರ ಸ್ಮಾರಕ ಕಟ್ಟಲು ವಿರೋಧ ಮಾಡ್ತಾರೆ ಅಂದ್ರೆ ಅಂತಹವರು ದೇಶವನ್ನ ವಿರೋಧಿಸುತ್ತಾರೆ. ದೇಶದ ವ್ಯವಸ್ಥೆಯನ್ನೆ ವಿರೋಧಿಸಿದಂತೆ ಎಂದು ಹೇಳಿದರು.

ಜನರು ಪೂಜ್ಯ ಭಾವನೆಯಿಂದ ಅವರನ್ನು ನೆನಪಿಸಿಕೊಳ್ಳಲು ಸ್ಮಾರಕ ಕಟ್ಟುತ್ತಾರೆ. ಹೊಸ ಪೀಳಿಗೆಗೆ ಅವರ ನೆನಪನ್ನು ಬದುಕಿಸಿಡುವ ಕೆಲಸ ಸ್ಮಾರಕದ ಮೂಲಕ ಆಗುತ್ತದೆ. ಅದಕ್ಕೂ ಅಡ್ಡಿಪಡಿಸದರೆ ದೇಶ ಕಟ್ಟುವುದು ಹೇಗೆ ? ಎಂದು ಅವರು ಪ್ರಶ್ನಿಸಿದರು.

ಸಾರ್ವಕರ್ ರವರ ಅದರ್ಶಗಳನ್ನು ತಿಳಿಸಲು ಅವರಿಂದ ಪ್ರೇರಣೆ ಪಡೆಯಲು ಸ್ಮಾರಕ ನಿರ್ಮಿಸಲಾಗುತ್ತದೆ. ಅದನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದಾದರೇ ಜನತೆ ಕಾಂಗ್ರೇಸನ್ನು ಜನರು ವಿರೋಧಿಸಬೇಕು. ಸ್ವಾತಂತ್ರ್ಯ ಹೋರಾಟಗಾರರನ್ನ, ದೇಶ ಭಕ್ತರನ್ನ ಕಾಂಗ್ರೆಸ್ ವಿರೋಧಿಸುತ್ತದೆ ಅಂದ್ರೆ ಇದರ ಅರ್ಥ ಏನೂ ಎಂದು ಅವರು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!