Tuesday, April 30, 2024
Homeತಾಜಾ ಸುದ್ದಿಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹಿನ್ನೆಲೆ ಏನು?

ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹಿನ್ನೆಲೆ ಏನು?

spot_img
- Advertisement -
- Advertisement -

ನವದೆಹಲಿ:  ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯ ಘೋಷಣೆಯಾಗಿದೆ. ಒಡಿಶಾ ಮೂಲದ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಅವರನ್ನು  ಎನ್ ಡಿ ಎ ಮೈತ್ರಿಕೂಟ  ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಆ ಬಳಿಕ‌ ಯಾರು ಈ‌ ಪ್ರಭಾವಿ ಮಹಿಳೆ ಎಂಬ ಬಗ್ಗೆ ಎಲ್ಲರಲ್ಲೂ ಪ್ರಶ್ನೆ ಮೂಡಿದೆ.

ದೇಶದ ಗಮನ ಸೆಳೆಯುತ್ತಿರುವ ದ್ರೌಪದಿ ಮುರ್ಮು ಯಾರು?

ಮುಂದಿನ‌ ಭಾರತದ ರಾಷ್ಟ್ರಪತಿಯೆಂದೇ ಹೇಳಲಾಗುತ್ತಿರುವ ದ್ರೌಪದಿ ಮುರ್ಮು, 1958ರ ಜೂನ್ 20 ರಂದು ಜನಿಸಿದರು. ಈಗ 64 ವರ್ಷದ ಮುರ್ಮು ಅವರು ಬಿಜೆಪಿಯ ಸದಸ್ಯೆ. ಪ್ರಮುಖ ಬುಡಕಟ್ಡು, ಆದಿವಾಸಿ ಧ್ವನಿಯಾಗಿದ್ದ ಇವರು ಕೌನ್ಸಿಲರ್ ಆಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ರಾಯ್ರಂಗಪುರ ರಾಷ್ಟ್ರೀಯ ಸಲಹಾ ಮಂಡಳಿ ಉಪಾಧ್ಯಕ್ಷರಾದರು. 2013ರಲ್ಲಿ ಅವರು‌ ಬಿಜೆಪಿ ಪಕ್ಷದ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯ ಸ್ಥಾನಕ್ಕೆ ಏರಿದ್ದರು. ಭುವನೇಶ್ವರದ ರಮಾ ದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ಪದವಿ ಪಡೆದ ಅವರು ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಸುಮಾರು ಎರಡು ದಶಕಗಳನ್ನು ಕಳೆದಿದ್ದಾರೆ.

ಜಾರ್ಖಂಡ್‌ನ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಮುರ್ಮು ಅವರನ್ನು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಇಷ್ಟಪಡುತ್ತಿದ್ದವು. ಮುರ್ಮು ಅವರ ಉಮೇದುವಾರಿಕೆಯು ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಬೆಂಬಲವನ್ನು ಪಡೆಯುವ ಸಾಧ್ಯತೆಯಿದೆ. ಜೆಎಂಎಂ ಮುಖ್ಯಸ್ಥ ಸಿಬು ಸೊರೆನ್ ಮತ್ತು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ.

ದ್ರೌಪದಿ ಮುರ್ಮುಗೆ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿಯ ಬೆಂಬಲವೂ ಇದೆ. ಒಡಿಶಾದಲ್ಲಿ ಬಿಜೆಡಿ ಹಾಗೂ ಬಿಜೆಪಿ ಸಹಯೋಗದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದ ಸಮಯದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ದ್ರೌಪದಿ ಮುರ್ಮು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಬಿಜೆಪಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಆರಿಸಿರುವ ಹಿಂದೆ, 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬುಡಕಟ್ಟು ಮತಗಳ ಹಂಚಿಕೆಯ ಮೇಲೆ ಪರಿಣಾಮ ಬೀರುವುದಲ್ಲದೆ ಒಡಿಶಾದಲ್ಲಿ ಬಿಜೆಪಿಯ ಭವಿಷ್ಯವ ಕಂಡುಕೊಳ್ಳುವ ಲೆಕ್ಕಾಚಾರ ಇದೆ.

- Advertisement -
spot_img

Latest News

error: Content is protected !!