Saturday, May 18, 2024
Homeತಾಜಾ ಸುದ್ದಿಪೋಲೀಸರ ದಂಡದಿಂದ ತಪ್ಪಿಸಲು ಪತ್ನಿಯ ಒಳಉಡುಪನ್ನು ಮಾಸ್ಕ್ ​ನಂತೆ ಕಟ್ಟಿಕೊಂಡ ಗಂಡ

ಪೋಲೀಸರ ದಂಡದಿಂದ ತಪ್ಪಿಸಲು ಪತ್ನಿಯ ಒಳಉಡುಪನ್ನು ಮಾಸ್ಕ್ ​ನಂತೆ ಕಟ್ಟಿಕೊಂಡ ಗಂಡ

spot_img
- Advertisement -
- Advertisement -

ಭೂಪಾಲ್​: ಕೊರೋನಾ ಮಹಾಮಾರಿ ದೇಶವ್ಯಾಪಿ ಶರವೇಗದಲ್ಲಿ ಹಬ್ಬುತ್ತಿರುವಾಗ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯ ಮಾಡಿ ಸರಕಾರ ಮಾರ್ಗಸೂಚಿ ಆದೇಶ ಹೊರಡಿಸಿದೆ. ಆದರೆ ಜಾಗೃತಿಯ ಕೊರತೆಯಿಂದಾಗಿ ಹೆಚ್ಚಿನ ಜನತೆ ಇದರ ಗೋಜಿಗೆ ಹೋಗುವುದಿಲ್ಲ.

ಇದಕ್ಕೆ ಸಾಕ್ಷಿ ಎಂಬಂತೆ ಮಧ್ಯಪ್ರದೇಶದ ದಾಮಹ್​​ನಲ್ಲಿ ಮಾಸ್ಕ್ ಧರಿಸದ ಬೈಕ್ ಸವಾರನೊಬ್ಬ ಪೊಲೀಸರಿಂದ ಬೀಳುವ ದಂಡದಿಂದ ತಪ್ಪಿಸಲು ಪತ್ನಿಯ ಒಳಲಂಗವನ್ನು (ಸೀರೆಯ ಒಳಗೆ ಧರಿಸುವ ಲಂಗ)ನ್ನೇ ತೆಗೆದು ಮೂಗಿ, ಬಾಯಿಗೆ ಮುಚ್ಚಿಕೊಂಡು ಸುದ್ದಿಯಾಗಿದ್ದಾನೆ.

ಕೊರೋನಾ ಮಾರ್ಗಸೂಚಿ ಉಲ್ಲಂಘನೆಯ ದಂಡದಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಮಾಡಿದ ‘ಸಾಹಸ’ ನೋಡಿ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರೇ ಬೆರಗಾಗಿದ್ದಾರೆ.

ಘಟನೆಯ ವಿವರ:
ದಾಮೋಹ್​​ನ ಬಂಡಕ್​ಪುರದ ರಸ್ತೆಯಲ್ಲಿ ಪೊಲೀಸರು ಕೊರೋನಾ ಭೀತಿಯ ನಡುವೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ರಸ್ತೆಯಲ್ಲಿ ಓಡಾಡುವವರನ್ನು ಹಿಡಿದು ಪ್ರಶ್ನೆ ಮಾಡುತ್ತಿದ್ದರು. ಆ ಸಮಯದಲ್ಲಿ ಬೈಕ್ ಸವಾರನೊಬ್ಬ ಪೊಲೀಸರು ರಸ್ತೆಯಲ್ಲಿ ನಿಂತಿರುವುದನ್ನು ದೂರದಿಂದಲೇ ಗಮನಿಸಿದ.

ಮಾಸ್ಕ ಧರಿಸದೇ ಹಾಗೂ ಯಾವುದೇ ಮಾಸ್ಕ ಅಥವಾ ಕರವಸ್ತ್ರಗಳನ್ನು ತನ್ನೊಂದಿಗೆ ಇಟ್ಟುಕೊಂಡಿರದಿದ್ದ ಈತ ತಕ್ಷಣ ತನ್ನ ಬ್ಯಾಗ್​​ನಲ್ಲಿದ್ದ ಪತ್ನಿಯ ಒಳಲಂಗವನ್ನೇ ತೆಗೆದು ಮಾಸ್ಕ್​ನಂತೆ ಕಟ್ಟಿಕೊಂಡಿದ್ದಾನೆ. ಹಾಗೇ ಪೊಲೀಸರು ವಿಧಿಸುವ ದಂಡದಿಂದ ಪಾರಾಗಿದ್ದಾನೆ. ಆದರೆ ಅವನ ಫೋಟೋ, ವಿಡಿಯೋಗಳು ಸಿಕ್ಕಾಪಟೆ ವೈರಲ್​ ಆಗಿ, ನಗು ಮೂಡಿಸಿದೆ.

- Advertisement -
spot_img

Latest News

error: Content is protected !!