ವಾಟ್ಸಾಪ್, ಬಳಕೆದಾರರಿಗೊಂದು ಖುಷಿ ಸುದ್ದಿ ನೋಡಿದೆ. ವಾಟ್ಸಾಪ್ ಗ್ರೂಪ್ ಚಾಟಿಂಗ್ ಬಗ್ಗೆ ಅನೇಕ ದಿನಗಳಿಂದ ಸುದ್ದಿಯಲ್ಲಿದೆ. ಗ್ರೂಪ್ ವಾಯ್ಸ್ ಕಾಲಿಂಗ್ ಹಾಗೂ ಗ್ರೂಪ್ ವಿಡಿಯೋ ಚಾಟಿಂಗ್ ನಲ್ಲಿ ಪಾಲ್ಗೊಳ್ಳುವ ಬಳಕೆದಾರರ ಮಿತಿಯನ್ನು ಹೆಚ್ಚಿಸಲಿದೆ ಎಂಬ ಸುದ್ದಿ ಹರಡಿತ್ತು. ಈಗ ಈ ಬಗ್ಗೆ ವಾಟ್ಸಾಪ್ ಕೆಲಸ ಶುರು ಮಾಡಿದೆ.
ಸಿಕ್ಕ ಮಾಹಿತಿ ಪ್ರಕಾರ ಇನ್ಮುಂದೆ ಮೊದಲಿಗಿಂತ ಎರಡು ಪಟ್ಟು ಹೆಚ್ಚು ಜನರು ವಾಟ್ಸಾಪ್ ಗ್ರೂಪ್ ಚಾಟ್ ನಲ್ಲಿ ಒಟ್ಟಿಗೆ ಬರಬಹುದು. ಆಂಡ್ರಾಯ್ಡ್‌ನ ಬೀಟಾ ಆವೃತ್ತಿಯಲ್ಲಿ ಈಗ 8 ಜನರನ್ನು ಗುಂಪು ಕರೆಗೆ ಆಹ್ವಾನಿಸಬಹುದು ಎಂದು ವರದಿ ಮಾಡಲಾಗಿದೆ.
ಆಂಡ್ರಾಯ್ಡ್ ಬೀಟಾ (ವಿ 2.20.133) ಮತ್ತು ಐಒಎಸ್ ಬೀಟಾ (ವಿ 2.20.50.25) ಗಾಗಿ ಹೊಸ ನವೀಕರಣವನ್ನು ಹೊರತರಲಾಗಿದೆ. ಧ್ವನಿ ಹಾಗೂ ವಿಡಿಯೋ ಕರೆಗೆ ಎರಡು ಆಯ್ಕೆಗಳಿವೆ. ನೇರವಾಗಿ ಗುಂಪಿಗೆ ಹೋಗಿ ಮಾಡುವ ವಿಧಾನ ಒಂದಾದ್ರೆ ಇನ್ನೊಂದು ಒಂದೊಂದೇ ನಂಬರ್ ಗೆ ಹೋಗಿ ಕರೆ ಮಾಡುವ ಮೂಲಕ ಗುಂಪು ಕರೆಗೆ ಸೇರಿಸಿಕೊಳ್ಳುವುದು. ಏಕಕಾಲದಲ್ಲಿ 8 ಜನರನ್ನು ಸೇರಿಸುವ ಈ ಹೊಸ ವಾಟ್ಸಾಪ್ ವೈಶಿಷ್ಟ್ಯವು ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.