Friday, June 26, 2026
Homeಕರಾವಳಿಉಡುಪಿಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್ ಯಾರು ? ಸರ್ಕಾರ ಇಂಥದಕ್ಕೆ ಕುಮ್ಮಕ್ಕು...

ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್ ಯಾರು ? ಸರ್ಕಾರ ಇಂಥದಕ್ಕೆ ಕುಮ್ಮಕ್ಕು ಕೊಡಬಾರದು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

- Advertisement -
- Advertisement -

ಬೆಂಗಳೂರು : ಪಿ.ಯು.ಸಿ ಹಂತದಲ್ಲಿ ಶಾಲಾ ಸಮವಸ್ತ್ರ ಕಡ್ಡಾಯಗೊಳಿಸಬೇಕು ಎಂದು ಸರ್ಕಾರ ಎಲ್ಲೂ ಹೇಳಲಿಲ್ಲ. ಕುಂದಾಪುರದ ಸರ್ಕಾರಿ ಕಾಲೇಜೊಂದರ ಪ್ರಾಂಶುಪಾಲರು ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿಗಳಿಗೆ ಕಾಲೇಜು ಗೇಟ್ ಹಾಕಿ ಪ್ರವೇಶ ನಿರಾಕರಿಸಿರುವುದು ವ್ಯಕ್ತಿಯೊಬ್ಬನ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ಪ್ರಾಂಶುಪಾಲರು ಗೇಟ್ ನಲ್ಲಿ ಮಕ್ಕಳನ್ನು ತಡೆಯುವುದು ಅಮಾನವೀಯ , ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್ ಯಾರು ? ಸರ್ಕಾರ ಇಂಥದಕ್ಕೆ ಕುಮ್ಮಕ್ಕು ಕೊಡಬಾರದು . ಪ್ರಾಂಶುಪಾಲರನ್ನು ವಜಾ ಮಾಡಬೇಕು. ಇದು ಮಾನವೀಯತೆ ಅಲ್ಲ ಎಂದು ಹೇಳಿದ್ದಾರೆ .

ಹಿಜಾಬ್ ಧರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರಿಂದ ಇತರರಿಗೆ ಏನು ತೊಂದರೆ ? ಮುಸ್ಲಿಂ ಹೆಣ್ಣು ಮಕ್ಕಳನ್ನು ವಿದ್ಯೆಯಿಂದ ವಂಚಿತಗೊಳಿಸುವ ಪ್ರಯತ್ನವಿದು ಎಂದು ಕಿಡಿಗಾರಿದ್ದಾರೆ.

- Advertisement -

Latest News

error: Content is protected !!