Sunday, May 5, 2024
Homeಕರಾವಳಿಉಡುಪಿಸ್ವಾಮೀಜಿಗಳು, ಹಿರಿಯರ ಭಾವನೆ ಗೌರವಿಸಬೇಕಾದ್ದು ಅನಿವಾರ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಸ್ವಾಮೀಜಿಗಳು, ಹಿರಿಯರ ಭಾವನೆ ಗೌರವಿಸಬೇಕಾದ್ದು ಅನಿವಾರ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ

spot_img
- Advertisement -
- Advertisement -

ಮಂಗಳೂರು: ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ, ಹೇಳಿಕೆ ಕೊಡುವಂತಹ ಹಕ್ಕು, ಅವಕಾಶಗಳಿವೆ. ಅದರಂತೆ ಸ್ವಾಮೀಜಿಗಳು, ಹಿರಿಯರು ತಮ್ಮ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರೆ, ಅದನ್ನು ಗೌರವಿಸಬೇಕಾದ್ದು ಅನಿವಾರ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಸಚಿವರು, ಭಾರತೀಯ ಜನತಾ ಪಾರ್ಟಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ, ನಮ್ಮನ್ನು ಬೆಳೆಸಿದ ಪಾರ್ಟಿ, ಪಾರ್ಟಿಯನ್ನು ಕಟ್ಟಿ ಬೆಳೆಸಿದ ಹಿರಿಯರು ನಮಗೆ ಅವರ ಅನುಭವದ ಮಾರ್ಗದರ್ಶನ ಮಾಡಿ, ನಮ್ಮ ಕೆಲಸಗಳಿಗೆ ಪ್ರೇರಣೆ ನೀಡಿ, ನಮ್ಮಂತಹ ಸಾಮಾನ್ಯ ಕಾರ್ಯಕರ್ತರಿಗೆ ಬಹುದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ನಾನು ಮತ್ತು ನನ್ನಂಥವರು, ನಮ್ಮ ಹಿರಿಯರು, ನಮ್ಮ ಹೈಕಮಾಂಡ್, ನಮ್ಮ ಪಾರ್ಟಿ, ನಮ್ಮ ರಾಜ್ಯಾಧ್ಯಕ್ಷರು, ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಮಾತ್ರ ನಾವು ಬದ್ಧ ಎಂದಿರುವ ಕೋಟ ಶ್ರೀನಿವಾಸ ಪೂಜಾರಿ ಯಾರ್ಯಾರು ಏನೇನು ಹೇಳಿಕೆ ನೀಡುತ್ತಾರೋ ಅದನ್ನು ಗೌರವಿಸೋಣ ಎಂದು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕೊಪ್ಪಳದಲ್ಲಿ ಪ್ರಣವಾನಂದ ಸ್ವಾಮೀಜಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಿಎಂ ಮಾಡಬೇಕು ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಚಿವರು ಈ ಪ್ರಕಟಣೆ ಹೊರಡಿಸಿದ್ದಾರೆ.

- Advertisement -
spot_img

Latest News

error: Content is protected !!