Friday, June 28, 2024
Homeತಾಜಾ ಸುದ್ದಿಕೇರಳದಲ್ಲಿ ನಾವು ನಮ್ಮ ಖಾತೆಯನ್ನು ತೆರೆದಿದ್ದೇವೆ; ಕೆ.ಸುರೇಂದ್ರನ್

ಕೇರಳದಲ್ಲಿ ನಾವು ನಮ್ಮ ಖಾತೆಯನ್ನು ತೆರೆದಿದ್ದೇವೆ; ಕೆ.ಸುರೇಂದ್ರನ್

spot_img
- Advertisement -
- Advertisement -

ತಿರುವನಂತಪುರಂ: ‘ ನಾವು ನಮ್ಮ ಖಾತೆಯನ್ನು ತೆರೆದಿದ್ದೇವೆ ಮತ್ತು ನಮ್ಮ ಮತಗಳ ಹಂಚಿಕೆ ಹೆಚ್ಚಾಗಿದೆ. ಇದು ಬಿಜೆಪಿಗೆ ಅತ್ಯಂತ ಮಹತ್ವದ ಗೆಲುವು,’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, “ಕೇರಳದಲ್ಲಿ ಈ ಚುನಾವಣೆಯು ದೊಡ್ಡ ಯಾತ್ರೆಗೆ ನಾಂದಿಯಾಗಿದೆ. ಏಕೆಂದರೆ ಮುಂದೆ ನಮಗೆ ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭೆ ಚುನಾವಣೆಗಳು ನಡೆಯಲಿವೆ, ಅದರಲ್ಲಿ ಬಿಜೆಪಿ ಪ್ರಮುಖ ಸ್ಪರ್ಧಿಯಾಗಲಿದೆ. ತ್ರಿಶೂರ್ ನಲ್ಲಿ ನಟ ಸುರೇಶ್ ಗೋಪಿ ಅವರು ಆಯ್ಕೆಯಾಗುವ ಮೂಲಕ ಕೇರಳದ ಮೊದಲ ಬಿಜೆಪಿ ಸಂಸದ ಎಂಬ ಹೆಗ್ಗಳಿಗೆ ಪಡೆದುಕೊಂಡಿದ್ದಾರೆ. 16.68 % ಮತಗಳನ್ನು ಬಿಜೆಪಿ ಪಡೆದುಕೊಂಡಿದೆ,” ಎಂದರು.

ಇನ್ನು ವಯನಾಡ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಕಣಕ್ಕಿಳಿದಿದ್ದ ಸುರೇಂದ್ರನ್ 1,41,045 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಸಿಪಿಐ ನ ಅಣ್ಣಿ ರಾಜಾ ಎರಡನೇ ಸ್ಥಾನ ಪಡೆದಿದ್ದು, ರಾಹುಲ್ 6,47,445 ಮತಗಳನ್ನು ಪಡೆದು 3,64,422 ಮತಗಳ ಭಾರೀ ಗೆಲುವು ತನ್ನದಾಗಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!