Thursday, September 10, 2026
Homeಕರಾವಳಿಸುಬ್ರಹ್ಮಣ್ಯ : ಕೊಲ್ಲಮೊಗ್ರು ಕಲ್ಮಕಾರು ರಸ್ತೆ ಸೇತುವೆ ಜಲಾವೃತ!

ಸುಬ್ರಹ್ಮಣ್ಯ : ಕೊಲ್ಲಮೊಗ್ರು ಕಲ್ಮಕಾರು ರಸ್ತೆ ಸೇತುವೆ ಜಲಾವೃತ!

- Advertisement -
- Advertisement -

ಸುಳ್ಯ : ಸುಬ್ರಹ್ಮಣ್ಯ ಹಾಗೂ ಪರಿಸರದ ಪ್ರದೇಶದಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು ಕೊಲ್ಲಮೊಗ್ರು ಕಲ್ಮಕಾರು ರಸ್ತೆಯ ಶಾಲಾ ಬಳಿ ಇರುವ ಸೇತುವೆ ಜಲಾವೃತಗೊಂಡಿತು.

ಮಳೆ ನೀರು ರಸ್ತೆಯಲ್ಲಿ ತುಂಬಿದ್ದು ವಾಹನ ಸವಾರರು ಸಂಕಷ್ಟ ಅನುಭವಿಸಿದ್ದಾರೆ. ಭಾರೀ ಮಳೆಯಿಂದಾಗಿ ಭತ್ತದ ಕೊಯ್ಲಿಗೆ ಹಾಗೆಯೆ ಅಡಿಕೆ ಸಹಿತ ಕೃಷಿ ತೋಟಗಳಿಗೆ ತೊಂದರೆಯಾಗಿದೆ. ಸುಬ್ರಹ್ಮಣ್ಯ, ಹರಿಹರ, ಐನೆಕಿದು, ಕೊಲ್ಲಮೊಗ್ರು, ಕಲ್ಮಕಾರು, ಪಂಜ, ಯೇನೆಕಲ್ಲು, ಬಳ್ಪ, ಕುಲ್ಕುಂದ, ಬಿಳಿನೆಲೆ, ಕಲ್ಲುಗುಡ್ಡೆ, ಇಚ್ಲಂಪಾಡಿ, ಕೊಣಾಜೆ ಪರಿಸರದಲ್ಲಿಯೂ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.

ಸುಳ್ಯ, ಪುತ್ತೂರು ಹೊರತುಪಡಿಸಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬುಧವಾರ ಮಳೆ ಪ್ರಮಾಣ ಕಡಿಮೆ ಇತ್ತು. ಉಡುಪಿ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣವಿತ್ತು.

- Advertisement -

Latest News

error: Content is protected !!