Tuesday, May 14, 2024
Homeತಾಜಾ ಸುದ್ದಿಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು: ದುರ್ವಾಸನೆಯುಕ್ತ ವಾತಾವರಣ ಸೃಷ್ಟಿ

ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು: ದುರ್ವಾಸನೆಯುಕ್ತ ವಾತಾವರಣ ಸೃಷ್ಟಿ

spot_img
- Advertisement -
- Advertisement -

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಜಂಕ್ಷನ್ ಬಳಿಯಿಂದ ನೇಕಾರ ಮಹಲ್ ಕಟ್ಟಡದ ವರೆಗೆ ಹೆದ್ದಾರಿ ತುಂಬಾ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ಕಳೆದ ಕೆಲ ದಿನಗಳಿಂದ ಹರಿಯುತ್ತಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಹಳೆಯಂಗಡಿ ಮಾತಾ ರೆಸಿಡೆನ್ಸಿ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ತೆರೆದ ಪೈಪ್ ನಲ್ಲಿ ಹೆದ್ದಾರಿಗೆ ಬಿಡುತ್ತಿದ್ದು ಹೆದ್ದಾರಿ ಬದಿ , ಹಳೆಯಂಗಡಿ ಬಸ್ಸು ನಿಲ್ದಾಣ ಬಳಿ ಕೊಳಚೆ ನೀರು ನಿಂತಿದ್ದು  ಪ್ರಯಾಣಿಕರಿಗೆ, ವಾಹನ ಸವಾರರಿಗೆ, ನಾಗರಿಕರಿಗೆ ತೀವ್ರ ತೊಂದರೆಯಾಗಿದ್ದು, ಅಸಹ್ಯಕರ ವಾತಾವರಣ ಸೃಷ್ಟಿಯಾಗಿ ರೋಗಗಳ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅನೇಕಬಾರಿ ಬಹುಮಹಡಿ ಕಟ್ಟಡದ ಮಾಲೀಕರಿಗೆ ಅವ್ಯವಸ್ಥೆ ಬಗ್ಗೆ ನೋಟಿಸ್ ನೀಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡ ಜಿಲ್ಲಾಧಿಕಾರಿಗಳು ಬಹುಮಹಡಿ ಕಟ್ಟಡದ ಪರವಾನಿಗೆ ರದ್ದುಗೊಳಿಸಿ ಮಾಲೀಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹಳೆಯಂಗಡಿಯ ನಾಗರಿಕರು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!